ಶಿವಮೊಗ್ಗ:ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ(25) ಮತ್ತು ಅಮೃತಾ(21) ಎಂಬ ಯುವ ಜೋಡಿಯ ಬದುಕು ದುರಂತ ಅಂತ್ಯ ಕಂಡಿದೆ.
ಹೊಸನಗರ ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಳ್ಳೆ ಕ್ಯಾತರ ಕ್ಯಾಂಪ್ನ ನಿವಾಸಿ ಮಂಜುನಾಥ ಡಿ.31ರಂದು ಶಿಕಾರಿಪುರದ ಸಮೀಪ ಬೈಕ್ ಅಪಘಾತದಿಂದ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಬುಧವಾರ ಕೊನೆಯುಸಿರೆಳೆದರು. ತನ್ನ ಪತಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಅಮೃತಾ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.