ಕರ್ನಾಟಕ

karnataka

ETV Bharat / state

ತುಂಗಭದ್ರಾ ನದಿ ತಟದಲ್ಲಿ ಪ್ರತ್ಯಕ್ಷವಾದ ಅಪರೂಪದ ನೀರು ನಾಯಿಗಳು - water dog

ದಾವಣಗೆರೆ ಬಳಿಯ ತುಂಗಭದ್ರಾ ನದಿ ತಟದಲ್ಲಿ ನೀರು ನಾಯಿಗಳು ಕಂಡು ಬಂದಿವೆ. ಇವುಗಳನ್ನು ಕಂಡು ಪ್ರವಾಸಿಗರು ಖುಷಿಗೊಂಡಿದ್ದಾರೆ.

water-dog-spotted-in-tungabhadra-river-in-davanagere
ತುಂಗಭದ್ರಾ ನದಿಯ ತಟದಲ್ಲಿ ಪ್ರತ್ಯಕ್ಷವಾದ ಅಪರೂಪದ ನೀರು ನಾಯಿಗಳು (ETV Bharat)

By ETV Bharat Karnataka Team

Published : Jul 8, 2024, 6:50 PM IST

ತುಂಗಭದ್ರಾ ನದಿಯ ತಟದಲ್ಲಿ ಪ್ರತ್ಯಕ್ಷವಾದ ಅಪರೂಪದ ನೀರು ನಾಯಿಗಳು (ETV Bharat)

ದಾವಣಗೆರೆ :‌‌‌ ಮಲೆನಾಡಿನ ಭಾಗದಲ್ಲಿ ಭಾರಿ ಮಳೆ ಆಗ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಹನಿ ನೀರಿಲ್ಲದೇ ನದಿ ಭಣಗುಡುತ್ತಿತ್ತು. ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಗೆ ತುಂಗಭದ್ರೆಗೆ ಜೀವ ಕಳೆ ಬಂದಿದೆ. ಇದೀಗ ನದಿಯ ರಾಜನಹಳ್ಳಿ ಜಾಕ್​ವೆಲ್ ಬಳಿ ಅಪರೂಪದ ನೀರು ನಾಯಿಗಳು ಪ್ರತ್ಯಕ್ಷವಾಗಿವೆ.

ದಾವಣಗೆರೆ ಜಿಲ್ಲೆಯ ಹರಿಹರದ ಬಳಿ ಇರುವ ತುಂಗಭದ್ರಾ ನದಿಯ ತಟದಲ್ಲಿ ನೀರು ನಾಯಿಗಳು ಆಟವಾಡುತ್ತಿರುವ ಸುಂದರ ದೃಶ್ಯಗಳು ಕಂಡುಬಂತು. ಹೆಚ್ಚಾಗಿ ಮಳೆಗಾಲದಲ್ಲಿ ಕಾಣಿಸುವ ಅಪರೂಪದ ನೀರು ನಾಯಿಗಳು ಇದೀಗ ದಾವಣಗೆರೆ ಜಿಲ್ಲೆಯ ಹರಿಹರ ತುಂಗಭದ್ರಾ ನದಿಯಲ್ಲಿ ಕಾಣಿಸುತ್ತಿರುವುದರಿಂದ ಪ್ರವಾಸಿಗರು ಅವುಗಳತ್ತ ಧಾವಿಸುತ್ತಿದ್ದಾರೆ.

ಸಮೃದ್ಧವಾಗಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಆಟವಾಡುತ್ತಿರುವ ನೀರು ನಾಯಿಗಳ ದಂಡು ಪ್ರಯಾಣಿಕರು, ಪ್ರವಾಸಿಗರನ್ನು ಕಂಡು ನಾಚಿ ನೀರಿಗೆ ಧುಮುಕುತ್ತಿದ್ದವು.‌

ತುಂಬಿ ಹರಿಯುತ್ತಿರುವ ತುಂಗಭದ್ರಾ ದಡಕ್ಕೆ ಬಂದು ಆಟವಾಡುತ್ತಿರುವ ನೀರು ನಾಯಿಗಳ ಅಪರೂಪದ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಇನ್ನು ತುಂಗಭದ್ರಾ ನದಿಯ ವೀಕ್ಷಣೆಗೆ ಬಂದ ಜನರು ನೀರು ನಾಯಿ ನೋಡಿ ಪುಲ್ ಖುಷ್ ಆದ್ರು. ಸಾಮಾನ್ಯವಾಗಿ ವಿಜಯನಗರ ಜಿಲ್ಲೆಯಲ್ಲಿರುವ ತುಂಗಭದ್ರಾ ಡ್ಯಾಂ ತಟದಲ್ಲಿ ಈ ನೀರು ನಾಯಿಗಳನ್ನು ನೋಡಬಹುದಾಗಿದೆ. ಇನ್ನು ಶಿವಮೊಗ್ಗದ ಗಾಜನೂರು ಬಳಿಯ ಭದ್ರಾ ಜಲಾಶಯದಿಂದ ವಿಜಯನಗರ ತುಂಗಭದ್ರಾ ಡ್ಯಾಂ ತನಕ ನೀರು ನಾಯಿಗಳು ವಾಸಿಸುತ್ತವೆ.

ಇದನ್ನೂ ಓದಿ :ಗದಗ: ಶೆಟ್ಟಿಕೆರೆಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ

ABOUT THE AUTHOR

...view details