ದಾವಣಗೆರೆ:ಲೋಕಸಭಾ ಚುನಾವಣೆ ಮತದಾನ ಮುಗಿದಿದ್ದು, ಇಂದು ಒಂದೇ ಕುಟುಂಬದ 38 ಜನ ಏಕಕಾಲಕ್ಕೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದ್ರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಸಿಸಿ ಎ. ಬ್ಲಾಕ್ ಬಕೇಶ್ವರ ಪ್ರೌಢಶಾಲೆ ಮತಗಟ್ಟೆಯಲ್ಲಿ ಒಂದೇ ಕುಟುಂಬದ 38 ಜನ ಮತದಾನ ಮಾಡಿ ಸೆಲ್ಫಿಗೆ ಫೋಸ್ ಕೊಟ್ರು.
ದಾವಣಗೆರೆ ನಗರದ ಹಿರಿಯ ಪತ್ರಕರ್ತರಾದ ಕೆ ಏಕಾಂತಪ್ಪ ಅವರ ಕುಟುಂಬ ಹಾಗೂ ಅವರ ಸಹೋದರ ಕೆ. ಚಂದ್ರಣ್ಣನವರ ಕುಟುಂಬದಲ್ಲಿ ಒಟ್ಟು 38 ಜನರಿದ್ದಾರೆ. ಎಲ್ಲರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ರು. ಬಳಿಕ ಎಲ್ಲ 38 ಜನ ಮತದಾರರು ಸೆಲ್ಫಿಯಲ್ಲಿ ಸೆರೆಯಾದರು.
ಹಿರಿಯ ಪತ್ರಕರ್ತರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯರಾದ ಕೆ.ಚಂದ್ರಣ್ಣ ಹಾಗೂ ಅವರ ಸಹೋದರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರು ಕೆ. ಏಕಾಂತಪ್ಪ ಅವರ ಸಹೋದರರು, ಸಹೋದರಿಯರು, ಕುಟುಂಬ ವರ್ಗದವರು, ಮಕ್ಕಳು ಸೇರಿದಂತೆ ಒಟ್ಟು 38 ಜನ ಮತದಾರಿದ್ದಾರೆ. ಇಂದು ಎಲ್ಲರೂ ಏಕಕಾಲದಲ್ಲಿ ಬಕ್ಕೇಶ್ವರ ಪ್ರೌಢ ಶಾಲೆಯ ಮತಗಟ್ಟೆಗೆ ಭೇಟಿ ಕೊಟ್ಟು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಸೆಲ್ಫಿ ತೆಗೆಸಿಕೊಂಡರು.
ಮತದಾನದ ಬಳಿಕ ಪ್ರತಿಕ್ರಿಯಿಸಿ ಏಕಾಂತಪ್ಪನವರು, ನಮ್ಮದು 38 ಜನ್ರ ಕುಟುಂಬ. ಸಹೋದರ ಸಹೋದರಿಯರು, ಅವರ ಮಕ್ಕಳು ಸೇರಿರುವ ಕುಟುಂಬ. ಇಂದು ಪ್ರಜಾಪ್ರಭುತ್ವದ ಹಬ್ಬ. ಆದ್ದರಿಂದ ಎಲ್ಲರೂ ಒಟ್ಟಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದೇವೆ. ನಮ್ಮಂತೆಯೇ ಎಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಓದಿ:INDIA VOTING TURNOUT: 11 ರಾಜ್ಯಗಳಲ್ಲಿ ಸಂಜೆ 6 ಗಂಟೆವರೆಗೆ ಶೇ 61.16 ಮತದಾನ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ - Voter Turnout