ಕರ್ನಾಟಕ

karnataka

ETV Bharat / state

ಆದಿಚುಂಚನಗಿರಿ ಕ್ಷೇತ್ರದಿಂದ ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ - H D KUMARASWAMY

ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಕ್ಷೇತ್ರದ ಕುರಿತು ಮಾತನಾಡಿದ್ದಾರೆ. ಕ್ಷೇತ್ರವು ಬಡಜನರಿಗೆ, ಆರ್ಥಿಕ ದುರ್ಬಲರಿಗೆ ಬಹುದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ.

union-minister-h-d-kumaraswamy
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Nov 21, 2024, 4:59 PM IST

ಬೆಂಗಳೂರು :ಆರೋಗ್ಯ ಕ್ಷೇತ್ರದಲ್ಲಿ ಬಡಜನರಿಗೆ, ಆರ್ಥಿಕ ದುರ್ಬಲರಿಗೆ ಆದಿಚುಂಚನಗಿರಿ ಕ್ಷೇತ್ರವು ಬಹುದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿದೆ. ಜತೆಗೆ ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯದಲ್ಲಿಯೂ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್. ಡಿ ಕುಮಾರಸ್ವಾಮಿ ಶ್ಲಾಘಿಸಿದರು.

ಕೆಂಗೇರಿಯ ಬಿಜಿಎಸ್ ಸಿಟಿಯಲ್ಲಿ ನಡೆದ 16ನೇ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವರು, ಆದಿಚುಂಚನಗಿರಿ ಕ್ಷೇತ್ರವು ಜಾತಿ ಧರ್ಮ ಮೀರಿ ತ್ರಿವಿಧ ದಾಸೋಹದಲ್ಲಿ ಅವಿರತವಾಗಿ ನಿರತವಾಗಿದೆ. ಅನ್ನ, ಅಕ್ಷರ, ಆಶ್ರಯದ ಮೂಲಕ ಲಕ್ಷೋಪಲಕ್ಷ ಮಕ್ಕಳಿಗೆ ಆಸರೆಯಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ, ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಚಿತ್ರನಟಿ ಪ್ರಿಯಾಂಕಾ ಉಪೇಂದ್ರ ಇದ್ದಾರೆ (ETV Bharat)

ತ್ರಿವಿಧ ದಾಸೋಹದ ಜತೆಗೆ ಈಗ ಬಡಜನರಿಗೆ, ಅದರಲ್ಲಿಯೂ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಆರೋಗ್ಯ ಸೌಲಭ್ಯವನ್ನು ಕ್ಷೇತ್ರವು ನೀಡುತ್ತಿದೆ ಎಂದ ಸಚಿವರು, ಇಂತಹ ನಿಸ್ವಾರ್ಥ ಸೇವೆ ಅನುಕರಣೀಯ ಎಂದು ಅವರು ನುಡಿದರು.

ಜಾಗತಿಕ ಮಟ್ಟದಲ್ಲಿಯೂ ಶ್ರೀಮಠದ ಸಂಸ್ಥೆಗಳು ಪ್ರಖ್ಯಾತಿ : ರಾಜ್ಯ ಮಾತ್ರವಲ್ಲದೇ ದೇಶ -ವಿದೇಶಗಳಿಂದ ವಿದ್ಯಾರ್ಥಿಗಳು ಕಲಿಕಾರ್ಥಿಗಳಾಗಿ ಇಲ್ಲಿಗೆ ಬರುತ್ತಿದ್ದಾರೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಕಿರುವ ಗಟ್ಟಿಯಾದ ಅಡಿಪಾಯಾದ ಮೇಲೆ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಅವರು ಕ್ಷೇತ್ರದ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ಶ್ರೀಮಠದ ಸಂಸ್ಥೆಗಳು ಪ್ರಖ್ಯಾತಿ ಆಗಿವೆ ಎಂದು ಅವರು ಹೇಳಿದರು.

ಕೆಂಗೇರಿಯ ಬಿಜಿಎಸ್ ಸಿಟಿಯಲ್ಲಿ ನಡೆದ 16ನೇ ಸಂಸ್ಥಾಪಕರ ದಿನ ಕಾರ್ಯಕ್ರಮ (ETV Bharat)

ಶ್ರೀಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪ್ರಕಾಶನಾಥ ಸ್ವಾಮೀಜಿ ಅವರು, ಶಿಲ್ಪಿ ಅರುಣ್ ಯೋಗಿರಾಜ್, ಚಿತ್ರನಟಿ ಪ್ರಿಯಾಂಕಾ ಉಪೇಂದ್ರ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ :ಆದಿಚುಂಚನಗಿರಿ ಮಠಕ್ಕೆ ಒಟ್ಟಾಗಿ ಆಗಮಿಸಿದ ಬಿಜೆಪಿ, ಜೆಡಿಎಸ್ ನಾಯಕರು - BJP JDS Leaders

ABOUT THE AUTHOR

...view details