ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಅಪಘಾತ: ಮೂವರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ - Chikkaballapur Road Accident - CHIKKABALLAPUR ROAD ACCIDENT

ಕುಟುಂಬಸಮೇತ ಕೋಲಾರದಿಂದ ಆಂಧ್ರ ಪ್ರದೇಶದ ಪೆನುಗೊಂಡ ದರ್ಗಾಗೆ ಹೋಗುವ ವೇಳೆ ಟಾಟಾ ಸುಮೋ ಲಾರಿಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Accident in Chikkaballapur
ಚಿಕ್ಕಬಳ್ಳಾಪುರದಲ್ಲಿಂದು ಸಂಭವಿಸಿದ ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾದ ವಾಹನ (ETV Bharat)

By ETV Bharat Karnataka Team

Published : Sep 22, 2024, 2:23 PM IST

ಚಿಕ್ಕಬಳ್ಳಾಪುರ:ಓವರ್‌ಟೇಕ್ ಮಾಡಲು ಹೋಗಿ ಟಾಟಾ ಸುಮೋ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಸೇಟ್ ದಿನ್ನೇ ಬಳಿ ಇಂದು ಸಂಭವಿಸಿತು. ರಾಜಿಯಾ ಶಾಹಿನ್ (50) ಮೆಹಿಮುದಲ್ (45) ಹಾಗೂ ಮೊಲಾನಾ ಶಾಹಿನ್ ಸಾವನ್ನಪ್ಪಿದ್ದಾರೆ. ಇವರು ಬಿಹಾರದವರಾಗಿದ್ದು, ಕೋಲಾರದಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿಗಳು ಹಾಗೂ ಅವರ ಕುಟುಂಬ ಕೋಲಾರದ ದರ್ಗಾದಲ್ಲಿ ಕೆಲಸ ಮಾಡುತ್ತಿದ್ದರು. ಟಾಟಾ ಸುಮೋದಲ್ಲಿ ಕೋಲಾರದಿಂದ ಆಂಧ್ರದ ಪೆನುಗೊಂಡ ದರ್ಗಾಗೆ ಹೋಗುವಾಗ ಅಪಘಾತ ನಡೆದಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರದ ಜಾಲ್ನಾದಲ್ಲಿ ಬಸ್​-ಟ್ರಕ್ ಅಪಘಾತ: 8 ಸಾವು, 16 ಮಂದಿಗೆ ಗಾಯ - Maharashtra Bus Accident

ABOUT THE AUTHOR

...view details