ಕರ್ನಾಟಕ

karnataka

ETV Bharat / state

ರಾಯಚೂರು: ಆಟವಾಡುವಾಗ ಬೃಹತ್‌ ಗಾತ್ರದ ಕಲ್ಲುಬಂಡೆ ಬಿದ್ದು ಅಣ್ಣ-ತಂಗಿ ಸೇರಿ ಮೂವರು ಸಾವು

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡುರು ತಾಂಡದಲ್ಲಿ ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

By ETV Bharat Karnataka Team

Published : 6 hours ago

Updated : 5 hours ago

Raichur
ಘಟನಾ ಸ್ಥಳದ ಚಿತ್ರ (ETV Bharat)

ರಾಯಚೂರು: ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು ಅಣ್ಣ-ತಂಗಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಲಿಂಗಸೂಗೂರು ತಾಲೂಕಿನ ಗೌಡುರು ತಾಂಡದಲ್ಲಿ ಇಂದು ಈ ಘಟನೆ ನಡೆಯಿತು. ಮಂಜುನಾಥ ಮಾನಪ್ಪ(9), ವೈಶಾಲಿ ಮಾನಪ್ಪ(7) ಅಣ್ಣ-ತಂಗಿಯಾದರೆ, ಮತ್ತೋರ್ವ ಯುವಕ ರಘು ಸಾವನ್ನಪ್ಪಿದವರು.

ಆಗಿದ್ದೇನು?: ಹೊಲದಲ್ಲಿ ಆಟವಾಡಲು ತೆರಳಿದ ಮಕ್ಕಳ ಮೈಮೇಲೆ ದೊಡ್ಡ ಗಾತ್ರದ ಕಲ್ಲು ಬಿದ್ದಿದೆ. ನೋವು ತಾಳಲಾರದೇ ಮಕ್ಕಳು ಜೋರಾಗಿ ಚೀರಾಡಿದ್ದಾರೆ. ಆದರೆ ಬೃಹತ್ ಗಾತ್ರದ ಕಲ್ಲು ಆಗಿದ್ದರಿಂದ ಅವರಿಗೆ ತಕ್ಷಣವೇ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಆಟವಾಡುವಾಗ ಬೃಹತ್‌ ಗಾತ್ರದ ಕಲ್ಲುಬಂಡೆ ಬಿದ್ದು ಅಣ್ಣ-ತಂಗಿ ಸೇರಿ ಮೂವರು ಸಾವು (ETV Bharat)

ಘಟನೆಯಲ್ಲಿ ರಘು ಎಂಬ ಯುವಕ ಗಾಯಗೊಂಡಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮನಕಲಕುವಂತಿತ್ತು.

ಇದನ್ನೂ ಓದಿ:ಕಲಬುರಗಿಯಲ್ಲಿ ಧಾರಾಕಾರ ಮಳೆ ; ಮನೆಯ ಮೇಲೆ ಬೃಹತ್ ಬಂಡೆ ಉರುಳಿ ಅವಘಡ - huge rock fell on the house

Last Updated : 5 hours ago

ABOUT THE AUTHOR

...view details