ಮೈಸೂರು: ನವರಾತ್ರಿ ಸಂದರ್ಭದಲ್ಲಿ ಶಕ್ತಿ ದೇವತೆಯ ದರ್ಶನ ಪಡೆದರೆ ಸಂಕಷ್ಟಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ನಾಡಿನ ಎಲ್ಲ ಕಡೆಯಿಂದಲೂ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ದಸರಾ ನೋಡಿ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ.
ನವರಾತ್ರಿಯ 9 ದಿನ ಹಾಗೂ ವಿಜಯದಶಮಿ ಸೇರಿದಂತೆ 10 ದಿನಗಳ ಕಾಲ ಚಾಮುಂಡೇಶ್ವರಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಚಾಮುಂಡಿ ತಾಯಿಯ ದರ್ಶನಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರ ಆಗಮನ (ETV Bharat) ಚಾಮುಂಡಿ ಬೆಟ್ಟ ಹಾಗೂ ಅರಮನೆಯ ಸಂಪ್ರದಾಯ, ಪದ್ದತಿಗಳು ಒಂದೇ ಆಗಿವೆ. ಚಾಮುಂಡೇಶ್ವರಿ ರಾಜವಂಶಸ್ಥರ ಕುಲದೇವಿ. ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುತ್ತದೆ. ಇದೇ ರೀತಿ ಚಾಮುಂಡಿ ಬೆಟ್ಟದಲ್ಲೂ ಚಾಮುಂಡೇಶ್ವರಿಗೆ ಪ್ರತಿನಿತ್ಯ ವಿಶೇಷ ಅಲಂಕಾರ, ಪೂಜೆಯ ಜೊತೆಗೆ ಪ್ರತಿ ಸಂಜೆ 5 ಗಂಟೆಗೆ ಚಾಮುಂಡೇಶ್ವರಿಯ ದರ್ಬಾರ್ ಉತ್ಸವ ನಡೆಯುವುದು ವಿಶೇಷ.
ಶಕ್ತಿದೇವತೆಯ ದರ್ಶನ ಪಡೆದ ಯತ್ನಾಳ್: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನವರಾತ್ರಿಯ ಸಂದರ್ಭದಲ್ಲಿ ಶಕ್ತಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈಗ ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲ. ವಿಜಯದಶಮಿಯ ನಂತರ ಮಾತನಾಡುತ್ತೇನೆ" ಎಂದರು.
ಇದನ್ನೂ ಓದಿ:ಮೈಸೂರು ದಸರಾ: ಆಗಸದಲ್ಲಿ ಮೂಡಿದ ಸಹಸ್ರಾರು ಡ್ರೋನ್‌ಗಳ ಕಲರವ; ವಿಜಯ್ ಪ್ರಕಾಶ್ ಗಾಯನ ಮೋಡಿ