ನಿವೃತ್ತಿಯಾದ ಸಿಬ್ಬಂದಿಗೆ ಡ್ರೈವರ್ ಆದ ಲೇಡಿ ತಹಶೀಲ್ದಾರ್, ಮನೆವರೆಗೂ ಡ್ರಾಪ್ (ETV Bharat) ಶಿವಮೊಗ್ಗ: ಸರ್ಕಾರಿ ನೌಕರಿಯಲ್ಲಿ ವಯೋ ನಿವೃತ್ತಿಯಾದವರಿಗೆ ಸನ್ಮಾನ ಮಾಡಿ ಮನೆಗೆ ಕಳುಹಿಸುವುದು ಸಾಮಾನ್ಯ. ಆದರೆ, ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ತಮ್ಮ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಯೊಬ್ಬರು ನಿವೃತ್ತಿಯಾದ ಹಿನ್ನೆಲೆ ಅವರನ್ನು ತಮ್ಮ ವಾಹನದಲ್ಲಿ ಅವರ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗೆ ಬೀಳ್ಕೊಡುಗೆ ಸಮಾರಂಭ (ETV Bharat) ಉತ್ತಮ ಕೆಲಸಕ್ಕೆ ಸಿಕ್ಕ ಗೌರವ; ಹೊಸನಗರ ತಾಲೂಕು ಕಂದಾಯ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಸದಾಶಿವಪ್ಪ ಎಸ್ ವಿ ಅವರು ಶನಿವಾರ (ಆ.31) ವಯೋನಿವೃತ್ತಿ ಹೊಂದಿದರು. ಅವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದರು.
ನಿವೃತ್ತ ಗ್ರಾಮ ಆಡಳಿತ ಅಧಿಕಾರಿಗೆ ಬೀಳ್ಕೊಡುಗೆ ಸಮಾರಂಭ (ETV Bharat) ಸದಾಶಿವಪ್ಪ ಅವರಿಗೆ ಶನಿವಾರ ಹೊಸನಗರ ಕಂದಾಯ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ತಹಶೀಲ್ದಾರ್ ಅವರು ತಾವು ತಾಲೂಕು ಆಡಳಿತಾಧಿಕಾರಿ ಆಗಿದ್ದರೂ ತಮ್ಮ ವಾಹನದಲ್ಲಿ ಸದಾಶಿವಪ್ಪರನ್ನು ಇಲಾಖೆಯ ವಾಹನದಲ್ಲಿ ಕೂರಿಸಿಕೊಂಡು ಅವರ ಮನೆಗೆ ತಾವೇ ಡ್ರೈವ್ ಮಾಡಿಕೊಂಡು ಹೋಗಿ ಬಿಟ್ಟು ಬರುವ ಮೂಲಕ ಮಾದರಿ ಅಧಿಕಾರಿಯಾಗಿದ್ದಾರೆ. ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ :ವರ್ಗಾವಣೆಗೊಂಡ ಶಿಕ್ಷಕಿಯ ಮೆರವಣಿಗೆ; ಶಾಲಾ ಮಕ್ಕಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ - Farewell To Teacher