ಬೆಂಗಳೂರು: ಇತ್ತೀಚೆಗಷ್ಟೇ ಐಇಡಿ ಬಾಂಬ್ ಸ್ಟೋಟ ಪ್ರಕರಣದಿಂದ ದೇಶಾದ್ಯಂತ ಸುದ್ದಿಯಾಗಿರುವ ರಾಮೇಶ್ವರಂ ಕೆಫೆಗೆ ಭಾರತದ ಸಿಂಗಾಪೂರದ ಹೈ ಕಮಿಷನರ್ ಸೈಮನ್ ವಾಂಗ್ ಭೇಟಿ ನೀಡಿದ್ದು, ದೋಸೆ ರುಚಿ ಸವಿದಿದ್ದಾರೆ.
ಇಂಟರ್ನ್ಯಾಷನಲ್ ಟೆಕ್ನಾಲಾಜಿ ಪಾರ್ ಲಿಮಿಟೆಡ್ನ ಬ್ರೂಕ್ಫೀಲ್ಡ್ನಲ್ಲಿರುವ ಕೆಫೆಗೆ ಭೇಟಿ ನೀಡಿರುವ ಅವರು ಕೆಫೆಗೆ ಭೇಟಿ ನೀಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುನಾರಂಭಗೊಂಡಿರುವ ರಾಮೇಶ್ವರಂ ಕೆಫೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಕ್ಕೆ ಸಂತೋಷವಾಯಿತು. ಭಾರತದಲ್ಲಿನ ನಮ್ಮ ಸ್ನೇಹಿತರ ಪರವಾಗಿ ನಿಲ್ಲುತ್ತೇವೆ ಎಂದು ಅಡಿಬರಹ ಕೂಡಾ ಹಾಕಿದ್ದಾರೆ. ಇದರಲ್ಲಿ ಅವರು ದೋಸೆ, ಫಿಲ್ಟರ್ ಕಾಫಿಯ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಸಿಂಗಾಪೂರ್ ಎಂದು ಬರೆದಿರುವ ಕೆಂಪು ಬಣ್ಣದ ಟೀಶರ್ಟ್ ತೊಟ್ಟು ಸೈಮನ್ ಫೋಟೋಗೆ ಫೋಸ್ ನೀಡಿದ್ದಾರೆ.
ಮಾರ್ಚ್ 1ರಿಂದು ಕೆಫೆಗೆ ಬಂದಿದ್ದ ಶಂಕಿತ ಆರೋಪಿ ಸ್ಫೋಟಕದ ಬ್ಯಾಂಗ್ ಇರಿಸಿ, ಹೋಗಿದ್ದ. ಈ ಬ್ಯಾಗ್ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸ್ಫೋಟಗೊಂಡಿತು. ಈ ಪ್ರಕರಣ ಕುರಿತು ಇದೀಗ ಎನ್ಐಎ ತನಿಖೆ ನಡೆಸುತ್ತಿದೆ. ಘಟನೆ ನಡೆದ ವಾರದ ಬಳಿಕ ಅಂದರೆ, ಮಾರ್ಚ್ 9ರಿಂದ ಕೆಫೆ ಪುನಾರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲೆಲ್ಲಾ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನೂ ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ ಬಳಿಕವೇ ಪ್ರವೇಶಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.