ರಾಯಚೂರು : ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿದೆ, ಬಿಸಿಲೂರು ಎಂದೇ ಖ್ಯಾತಿ ಪಡೆದಿರುವ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿ ಜನರನ್ನು ಬಸವಳಿಯುವಂತೆ ಮಾಡುತ್ತಿದೆ. ಹೀಗಾಗಿ ನಗರದ ಟ್ರಾಫಿಕ್ ಸಿಗ್ನಲ್ ಬಳಿ ವಾಹನ ಸವಾರರ ಅನುಕೂಲಕ್ಕೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ಬಸವೇಶ್ವರ ವೃತ್ತದ ಹತ್ತಿರ ಟ್ರಾಫಿಕ್ ಸಿಗ್ನಲ್ ಇರುವುದ್ದರಿಂದ ಬಿಸಿಲಿನಲ್ಲಿ ವಾಹನ ಸವಾರರು ನಿಲ್ಲುತ್ತಾರೆ. ಈ ಸಮಯದಲ್ಲಿ ವಾಹನ ಸವಾರರು ನಿಲ್ಲಲ್ಲು ಕಷ್ಟವಾಗುತ್ತಿದೆ. ಇದರಿಂದ ಜಿಲ್ಲಾಡಳಿತವು ಸವಾರರಿಗೆ ನೆರಳಿನ ವ್ಯವಸ್ಥೆ ಒದಗಿಸುವ ತೀರ್ಮಾನಕ್ಕೆ ಬಂದು, ಶೆಲ್ಟರ್ ವ್ಯವಸ್ಥೆ ಮಾಡಿದೆ. ಸದ್ಯ ಬಸವೇಶ್ವರ ವೃತ್ತದ ಬಳಿ ನಿರ್ಮಾಣ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸಿಗ್ನಲ್ ಇರುವಾಗ ಕೊಂಚ ನೆರಳಿನ ರಿಲ್ಯಾಕ್ಸ್ ಸಿಗುತ್ತಿದೆ.
ಕಳೆದ ಬಾರಿಗೆ ಹೋಲಿಸಿದರೆ, ಈ ಸಲ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜನರಲ್ಲಿ ಮನವಿ ಮಾಡುವುದು ಏನೆಂದರೆ ಬೆಳಗ್ಗೆ 6ರಿಂದ 11 ಗಂಟೆ ವರಗೆ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಬಳಿಕ ಸಂಜೆ ವೇಳೆ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಬೇಕು. ಹೀಟ್ ಸ್ಟೋಕ್ ಈ ಸಂದರ್ಭದಲ್ಲಿ ಹೆಚ್ಚಾಗಿ ಆಗುವ ಸಂಭವವಿದೆ. ತಲೆಗೆ ಟೋಪಿ, ಹೆಚ್ಚಾಗಿ ನೀರು ಕುಡಿಯುವುದು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವತ್ತು ಜಿಲ್ಲಾಡಳಿತದಿಂದ ವಾಹನ ಸವಾರರಿಗೆ ನೆರಳಿ ವ್ಯವಸ್ಥೆ ಒದಗಿಸುವ ಹಿನ್ನೆಲೆಯಲ್ಲಿ ಶೆಲ್ಟರ್ ನಿಲುಗಡೆ ಮಾಡಿರುವುದು ಒಳ್ಳೆಯ ಕಾರ್ಯ ಎಂದು ವೈದ್ಯರಾದ ಡಾ.ನಾಗರಾಜ ಬಾಲ್ಕಿ ಹೇಳಿದ್ದಾರೆ.