ಕರ್ನಾಟಕ

karnataka

ETV Bharat / state

ಸಿದ್ದೇಶ್ವರ್ ಹತ್ತಿರ ಇರುವುದು ಕಳ್ಳ ಹಣ: ಶಾಮನೂರು ಶಿವಶಂಕರಪ್ಪ - Shamanuru Shivashankarappa - SHAMANURU SHIVASHANKARAPPA

ಜಿ.ಎಂ.ಸಿದ್ದೇಶ್ವರ್​ ವಿರುದ್ಧ ಶಾಮನೂರು ಶಿವಶಂಕರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ (ETV Bharat)

By ETV Bharat Karnataka Team

Published : May 30, 2024, 8:17 AM IST

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂದರೆ ಕೊಡುಗೈ ದಾನಿ ಇದ್ದಂತೆ. ನಾನು ಜಿ.ಎಂ.ಸಿದ್ದೇಶ್ವರ ರೀತಿ ಅಲ್ಲ. ಆದರೆ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾನೆ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಗೆಲ್ಲುತ್ತಾರೆ ಎಂದು ಜೂಜಾಟ ಮಾಡಿ ದುಡ್ಡು ಕೊಡಬೇಡಿ ಎಂದು ಸಿದ್ದೇಶ್ವರ್ ಹೇಳಿದ್ದಾರೆ. ಸಿದ್ದೇಶ್ವರ್​ನಂತಹ ಕಳ್ಳ ಬೇರಾರೂ ಇಲ್ಲ. ಅವನ ಬಳಿ ಇರುವುದು ಕಳ್ಳ ಹಣ. ಸಿದ್ದೇಶ್ವರ್​ ಒಂದೇ ಖಾತೆಯಿಂದ ಗುಟ್ಕಾ ಮಾರಾಟ ಮಾಡುವುದಿಲ್ಲ, ಬದಲಿಗೆ ಹಲವಾರು ಖಾತೆಗಳ ಮೂಲಕ ಮಾರಾಟ ಮಾಡಿ ವಾಣಿಜ್ಯ ತೆರಿಗೆ ವಂಚಿಸುತ್ತಾನೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಕಾಂಗ್ರೆಸ್​ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್​, ಈ ಬಾರಿ ರಾಜ್ಯದಲ್ಲಿ ಉತ್ತಮ ಚುನಾವಣೆ ಆಗಿದೆ. ಎಂಟು ವಿಧಾನಸಭಾ ಕ್ಷೇತ್ರದ ಮುಖಂಡರು ಭೇಟಿಯಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಒಳ್ಳೆಯ ಚುನಾವಣೆ ಮಾಡಿದ್ದೇವೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ದಾವಣಗೆರೆ ಇತಿಹಾಸದಲ್ಲಿ ಈ ರೀತಿಯ ಚುನಾವಣೆ ಇದೇ ಮೊದಲು ಎಂಬುದು ಕಾರ್ಯಕರ್ತರ ಅಭಿಪ್ರಾಯ. ಗ್ಯಾರಂಟಿಗಳಿಂದ ನಮಗೆ ಗೆಲುವಾಗಲಿದೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.

ಇದನ್ನೂ ಓದಿ:ವಿಜಯೇಂದ್ರ ಅವರೇ ನಿಮ್ಮ ತಂದೆಯ ಕಾರಣಕ್ಕೆ ಅಧಿಕಾರ ಸಿಕ್ಕಿದೆ, ಅದನ್ನು ಬಿಟ್ಟರೇ ನೀವು ಸೊನ್ನೆ: ಪ್ರದೀಪ್ ಈಶ್ವರ್ - MLA PRADEEP ESHWAR

ABOUT THE AUTHOR

...view details