ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಭದ್ರಕೋಟೆಯಲ್ಲಿ ಅರಳದ ಕಮಲ: ಸಂಡೂರಿನಲ್ಲಿ ಗೆದ್ದ ಅನ್ನಪೂರ್ಣ ತುಕಾರಾಂ - SANDUR BY ELECTION RESULT

ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಜಯ ಸಾಧಿಸಿದ್ದಾರೆ. ಬಿಜೆಪಿಗೆ ಸೋಲಾಗಿದೆ.

Congress Candidate ANNAPURNA TUKARAM Temple Visit
ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ದೇವಸ್ಥಾನ ಭೇಟಿ (ETV Bharat)

By ETV Bharat Karnataka Team

Published : Nov 23, 2024, 10:54 AM IST

ಸಂಡೂರು:ಸಂಡೂರು ಉಪಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಗೆದ್ದಿದ್ದು, ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಂಗಾರು ಹನುಮಂತು ಸೋಲನುಭವಿಸಿದ್ದಾರೆ.

ಅನ್ನಪೂರ್ಣ ತುಕಾರಾಂ 93,616 ಮತ ಪಡೆದರೆ ಮತ್ತು ಬಿಜೆಪಿಯ ಬಂಗಾರು ಹನುಮಂತು 83967 ಮತ ಪಡೆದಿದರು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲುಗೈ ಸಾಧಿಸಿದ್ದಾರೆ.

ಇಂದು ಸಂಡೂರು ಉಪಚುನಾವಣೆ ಫಲಿತಾಂಶ ಹಿನ್ನೆಲೆ ಅನ್ನಪೂರ್ಣ ತುಕಾರಾಂ ಅವರು ಪತಿ ಈ. ತುಕಾರಾಂ ಅವರ ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ ಚುನಾವಣಾ ಗೆಲುವಿಗಾಗಿ ಪ್ರಾರ್ಥಿಸಿದರು. ಈ ವೇಳೆ ಅನ್ನಪೂರ್ಣ ಅವರಿಗೆ ಬೆಂಬಲಿಗರು ಸಾಥ್​ ನೀಡಿದರು.

ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ದೇವಸ್ಥಾನ ಭೇಟಿ (ETV Bharat)

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅನ್ನಪೂರ್ಣ, "ಶ್ರೀ ಕನಕ ದುರ್ಗಮ್ಮ ತಾಯಿಯ ಆಶೀರ್ವಾದ ಪಡೆದಿದ್ದೇನೆ. ಗೆಲುವು ನಮ್ಮದೇ ಆಗಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ಸಂಡೂರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವ ವಿಶ್ವಾಸ ನನ್ನಲ್ಲಿದೆ. ಫಲಿತಾಂಶ ತೀವ್ರ ಹಣಾಹಣಿಯಲ್ಲಿ ಸಾಗುತ್ತಿದೆ. ಆದರೆ ಅಂತಿಮವಾಗಿ ಗೆಲುವು ಕಾಂಗ್ರೆಸ್​ನದ್ದಾಗಲಿದೆ. ತಾಯಿಯ ಬಳಿ ಕ್ಷೇತ್ರದ ಎಲ್ಲ ಜನರನ್ನು ಚೆನ್ನಾಗಿಟ್ಟಿರು ಹಾಗೂ ನನಗೂ ಹೆಚ್ಚಿನ ಶಕ್ತಿ ದಯಪಾಲಿಸು ಎಂದು ಬೇಡಿಕೊಂಡಿದ್ದೇನೆ. ಇನ್ನೂ ಕೆಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ. ಏನಾಗುತ್ತದೆ ಎಂದು ಕಾದು ನೋಡೋಣ" ಎಂದು ಹೇಳಿದರು.

ಕಾಂಗ್ರೆಸ್​ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ ಬೆಂಬಲಿಗರು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಉಪಚುನಾವಣೆ ಮತ ಎಣಿಕೆ: ಮೂರು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಮುಂದುವರಿಕೆ

ABOUT THE AUTHOR

...view details