ರಾಯಚೂರು:ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಕೇವಲ ಎರಡು ಎಕರೆ ಜಮೀನಿಗಾಗಿ ದಾಯಾದಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ವ್ಯಕ್ತಿಯೊಬ್ಬರ ಪ್ರಾಣವೇ ಹಾರಿ ಹೋಗಿದೆ. ಈ ಘಟನೆ ಜಿಲ್ಲೆಯ ಜೀನೂರು ಗ್ರಾಮದಲ್ಲಿ ನಡೆದಿದೆ. ಅಷ್ಟೇ ಅಲ್ಲ ದೂರು ಪ್ರತಿ ದೂರು ಸಹ ದಾಖಲಾಗಿವೆ.
ಏನಿದು ಘಟನೆ: ಜಿಲ್ಲೆಯ ಮಾನವಿ ತಾಲೂಕಿನ ಜೀನೂರು ಗ್ರಾಮದಲ್ಲಿ 2 ಎಕರೆ 10 ಗುಂಟೆ ಜಮೀನು ವಿಚಾರಕ್ಕೆ ಬಹಗಳ ದಿನಗಳಿಂದ ಅಣ್ಣ-ತಮ್ಮಂದಿರ ಮಧ್ಯೆ ಜಗಳ ನಡೆಯುತ್ತಿತ್ತು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕಟ್ಟಿಗೆ ಮತ್ತು ಕೊಡಲಿಯಿಂದ ಹೊಲದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಕೊಡಲಿ ಏಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 36 ವರ್ಷದ ರಾಮಣ್ಣ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ.