ಬೆಂಗಳೂರು:ಫೋನ್ ಟ್ಯಾಪ್ ಹಗರಣವನ್ನು ಸಿಬಿಐಗೆ ಕೊಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಅಂತಾ ಒಂದು ವರ್ಷದಿಂದ ಸರ್ಕಾರಕ್ಕೆ ತಿಳಿ ಹೇಳಿದ್ದೆವು. ಸರ್ಕಾರದಲ್ಲಿ ಇಂಟೆಲಿಜೆನ್ಸಿ ಇದೆಯೋ, ಸತ್ತು ಹೋಗಿದೆಯೋ?. ಉಡುಪಿ, ಬೆಳಗಾವಿ, ಚೆನ್ನಗಿರಿಯಲ್ಲಿ ಘಟನೆಗಳು ನಡೆದಿವೆ ಎಂದರು.
ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದ್ರಿಂದ ಬೆಂಗಳೂರಿನ ಕಂಪನಿಗಳು ಚೆನ್ನೈ ಹೋಗ್ತಿವೆ. ಅಂತಾರಾಷ್ಟ್ರೀಯ ಕಂಪನಿಗಳು ಕರ್ನಾಟಕದಿಂದ ಕಾಲು ಕಿತ್ತಿವೆ. ಬ್ಯಾಡ್ ಬೆಂಗಳೂರು ಆಗಿದೆ. ಕಾನೂನು ಸುವ್ಯವಸ್ಥೆ ಹಾಳಾದರೆ ಆರ್ಥಿಕತೆ ಕುಸಿಯುತ್ತೆ. ಫೋನ್ ಟ್ಯಾಪ್ ಹಗರಣವನ್ನು ಸಿಬಿಐಗೆ ಕೊಡಿ. ನಾವೇ ಸಾಕ್ಷಿ ಕೊಡೋದಾದ್ರೇ ಸರ್ಕಾರ ಯಾಕೆ ಬೇಕು? ಎಂದು ವಾಗ್ದಾಳಿ ನಡೆಸಿದರು.
ಮುಂದಿನ ದಿನಗಳಲ್ಲಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಹಾಗೆ ಆಗುತ್ತೆ. ಸಿದ್ದರಾಮಯ್ಯ ಅವರೇ ಈಗಲಾದ್ರೂ ನಿದ್ದೆಯಿಂದ ಎದ್ದೇಳಿ. ಸರ್ಕಾರ ಕೇವಲ ಲೂಟಿಗೆ ಇಳಿದಿದೆ. ಆಡಳಿತ ಕುಸಿದು ಹೋಗಿದೆ. ಸಿದ್ದರಾಮಯ್ಯ ಮಜಾ ಮಾಡಿಕೊಂಡು ಇದ್ದಾರೆ. ಅಧಿಕಾರಿಗಳು ಸಿಎಂಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ. ಈ ಸರ್ಕಾರ ಇಡೀ ರಾಜ್ಯವನ್ನು ದಿವಾಳಿ ಮಾಡಿದೆ. ಕಾನೂನುಗಳನ್ನು ಗಾಳಿಗೆ ತೂರಿದೆ ಎಂದು ಕಿಡಿ ಕಾರಿದರು.
ದೇವೇಗೌಡರು ಪ್ರಜ್ವಲ್ ರೇವಣ್ಣಗೆ ವಿನಂತಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣನ ಓಡಿ ಹೋಗುವುದಕ್ಕೆ ಬಿಟ್ಟು, ಈಗ ಮೋದಿನ ಟೀಕೆ ಮಾಡ್ತಾರೆ. ಪೆನ್ಡ್ರೈವ್ ಹಂಚಿದವರು ಸಹ ಅಪರಾಧಿ. ಬೆಂಗಳೂರಲ್ಲಿ ಅರಾಮವಾಗಿ ಓಡಾಡ್ತಾ ಇದ್ದಾನೆ. ಪೆನ್ ಡ್ರೈವ್ನ ಡೈರೆಕ್ಷರ್, ಪ್ರೋಡಕ್ಷನ್ ಕಾಂಗ್ರೆಸ್ ಸರ್ಕಾರದ್ದು. ಪ್ರಜ್ವಲ್ ರೇವಣ್ಣನ ಓಡಿ ಹೋಗೋಕೆ ಬಿಟ್ಟಿದ್ದು ಸರ್ಕಾರ. ಶಿವರಾಮೇಗೌಡ ಮಾಡಿರೋ ಪೆನ್ ಡ್ರೈವ್ ಬಗ್ಗೆನೂ ತನಿಖೆ ಆಗಬೇಕು. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಎಸ್ಐಟಿ ಒಂದು ಸೈಡ್ ತನಿಖೆ ಮಾಡ್ತಿದೆ ಎಂದು ಆರೋಪಿಸಿದರು.