ಬೆಂಗಳೂರು:ದಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ 9 ದಿನಗಳಾಗಿವೆ. ಇನ್ನೂ ಸಹ ಆರೋಪಿಯ ಸುಳಿವು ಪತ್ತೆಯಾಗುತ್ತಿಲ್ಲ. ಪ್ರಕರಣದ ತನಿಖೆ ಆರಂಭಿಸಿರುವ ಎನ್ಐಎ ಅಧಿಕಾರಿಗಳು, ಆರೋಪಿಯ ಜಾಡು ಹಿಡಿದು ಹೊರಟಿದ್ದಾರೆ. ಈ ನಡುವೆ ಶಂಕಿತನ ಕೆಲ ಫೋಟೋಗಳನ್ನು ಎನ್ಐಎ ಬಿಡುಗಡೆಗೊಳಿಸಿ, ಆರೋಪಿಯನ್ನು ಯಾರಾದರೂ ನೋಡಿದ್ದಲ್ಲಿ ಅಥವಾ ಆತನ ಬಗ್ಗೆ ಸುಳಿವಿದ್ದಲ್ಲಿ ಮಾಹಿತಿ ನೀಡುವಂತೆ ಎನ್ಐಎ ಕೋರಿದೆ.
ಇಂದೂ ಸಹ ಎನ್ಐಎ ಅಧಿಕಾರಿಗಳು ಆರೋಪಿಯ ಮತ್ತಷ್ಟು ಫೋಟೋಗಳನ್ನು ಬಿಡುಗಡೆಗೊಳಿಸಿದ್ದು, ಆರೋಪಿಯ ಕುರಿತು ಯಾವುದೇ ಸುಳಿವಿದ್ದಲ್ಲಿ ಕೆಳಕಂಡ ಸಂಪರ್ಕ ಸಂಖ್ಯೆ ಅಥವಾ ಮೇಲ್ ಐಡಿಯನ್ನು ಸಂಪರ್ಕಿಸುವಂತೆ ಕೋರಿದೆ