ಹಾಸನ: ರಾಜ್ಯ ಸರ್ಕಾರ ದೇವೇಗೌಡರ ಕುಟುಂಬ ಒಡೆಯುವುದಕ್ಕೆ ಹೆಚ್.ಡಿ. ರೇವಣ್ಣ ಅವರನ್ನು ಕಿಡ್ನಾಪ್ ಕೇಸ್ನಲ್ಲಿ ಸಿಲುಕಿಸಿರುವುದು ತಪ್ಪು ಎಂದು ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದ್ದೇಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರೇವಣ್ಣ ಅವರದ್ದು ಮಗುವಿನಂತ ಮನಸ್ಸು, ಪ್ರಜ್ವಲ್ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ, ತನಿಖೆ ನಡೆಯಲಿ, ಸತ್ಯಾಂಶ ಹೊರಗೆ ಬರುತ್ತದೆ. ರೇವಣ್ಣ ಅವರ ಪ್ರಕರಣದಲ್ಲಿ ಸರ್ಕಾರ ಅನುಸರಿಸುತ್ತಿರುವ ನಡೆ ತಪ್ಪು ಮತ್ತು ವಿಷಾದನೀಯ ಎಂದರು.
ದೇವೇಗೌಡರ ಕುಟುಂಬ ಒಡೆಯುವುದಕ್ಕೆ ಸರ್ಕಾರ ರೇವಣ್ಣರನ್ನು ಕಿಡ್ನಾಪ್ ಕೇಸ್ನಲ್ಲಿ ಸಿಲುಕಿಸಿದೆ: ಶಾಸಕ ಸ್ವರೂಪ್ - Swaroop Prakash
ಪ್ರಜ್ವಲ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಶಾಸಕ ಹೆಚ್. ಪಿ. ಸ್ವರೂಪ್ ಪ್ರಕಾಶ್ ಒತ್ತಾಯಿಸಿದ್ದಾರೆ.
Published : May 13, 2024, 6:18 PM IST
|Updated : May 13, 2024, 7:18 PM IST
ಪ್ರಜ್ವಲ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇನೆ. ಈ ಪ್ರಕರಣದಲ್ಲಿ ಕಾರ್ತಿಕ್ ಬಂಧನವಾಗಿಲ್ಲ, ವಿಡಿಯೋ ಯಾರ‍್ಯಾರಿಗೆ ಕೊಟ್ಟಿದ್ದಾರೆ ಎಂದು ಕಾರ್ತಿಕ್ಗೆ ಮಾತ್ರ ಗೊತ್ತಿದೆ. ಹೀಗಾಗಿ ಇದರಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಸತ್ಯಾಂಶ ಹೊರ ಬರುತ್ತದೆ. ನಾನು ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿದ್ದೆ, ಆದರೆ ಪೊಲೀಸ್ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಹೀಗಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಭೇಟಿ ಮಾಡಿಕೊಂಡು ಬಂದೆ ಎಂದು ತಿಳಿಸಿದರು.
ಇದನ್ನೂ ಓದಿ:ರೇವಣ್ಜ ಜಾಮೀನು ಅರ್ಜಿ ವಿಚಾರಣೆ: ಕೆಲ ಹೊತ್ತಲ್ಲೇ ಆದೇಶ ಪ್ರಕಟಿಸಲಿರುವ ನ್ಯಾಯಾಲಯ - HD Revanna