ಕರ್ನಾಟಕ

karnataka

ಜಾಗತಿಕ ಹೂಡಿಕೆದಾರರ ಸಮಾವೇಶ: ದೆಹಲಿಗೆ ಸಚಿವ ಎಂ.ಬಿ.ಪಾಟೀಲ್ ಪಯಣ - M B Patil

By ETV Bharat Karnataka Team

Published : Sep 9, 2024, 10:50 PM IST

ಜಾಗತಿಕ ಹೂಡಿಕೆದಾರರ ಸಮಾವೇಶ ಹಿನ್ನೆಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ದೆಹಲಿಗೆ ತೆರಳಿದ್ದಾರೆ.

M B PATIL
ಎಂ.ಬಿ.ಪಾಟೀಲ್ (ETV Bharat)

ಬೆಂಗಳೂರು:ಮುಂಬರುವ ಫೆಬ್ರವರಿ 12ರಿಂದ 14ರವರೆಗೆ ಇಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ನಾನಾ ದೇಶಗಳ ರಾಯಭಾರಿಗಳು ಮತ್ತು ಔದ್ಯಮಿಕ ಸಂಘಟನೆಗಳನ್ನು ಭೇಟಿ ಮಾಡಲು ಮತ್ತು ನಿಗದಿತ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೋಮವಾರ ಸಂಜೆ ನವದೆಹಲಿಗೆ ಪಯಣ ಬೆಳೆಸಿದರು.

ಅಲ್ಲಿ ಅವರು ಸೆ.10 ಮತ್ತು 11ರಂದು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಮಂಗಳವಾರ ಸಂಜೆ 4ಕ್ಕೆ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಜೆ 5ಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವ ಪ್ರಮುಖರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ.

ತಮ್ಮ ಎರಡು ದಿನಗಳ ದೆಹಲಿ ಕಾರ್ಯಕ್ರಮದಲ್ಲಿ ಪಾಟೀಲರು, ಸಿಂಗಾಪುರ್ ಹೈಕಮಿಷನರ್, ಜರ್ಮನಿ ರಾಯಭಾರಿ, ಅಮೆರಿಕದ ಯುಎಸ್ ಚೇಂಬರ್ ಆಫ್ ಕಾಮರ್ಸ್, ಇಂಡೋ-ಅಮೆರಿಕ ಬಿಜಿನೆಸ್ ಕೌನ್ಸಿಲ್, ಟಾಯ್ ಜೋನ್ ಮುಂತಾದ ಸಂಘಟನೆಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಮಾತನಾಡಲಿದ್ದಾರೆ.

ಆ.11ರಂದು ಸಿಐಐ ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ಏರ್ಪಡಿಸಿರುವ ರೋಡ್ ಶೋನಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಭಾರತ್ ಸೆಮಿ ಸಿಸ್ಟಮ್ಸ್ ಏರ್ಪಡಿಸಿರುವ 'ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳು' ಕುರಿತ ವಿಚಾರ ಸಂಕಿರಣ ಸೇರಿದಂತೆ ಇನ್ನೂ ಅನೇಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಗಿಫ್ಟ್: ಹುಬ್ಬಳ್ಳಿ - ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು - Vande Bharat Express

ABOUT THE AUTHOR

...view details