ಕರ್ನಾಟಕ

karnataka

ETV Bharat / state

ಡಿ.ಕೆ.ಶಿವಕುಮಾರ್ ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ : ಸಚಿವ ಕೆ.ಎನ್. ರಾಜಣ್ಣ - MINISTER K N RAJANNA

ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

minister-k-n-rajanna-reacts-to-deputy-chief-minister-dk-shivakumar-statement
ಕೆ.ಎನ್.ರಾಜಣ್ಣ (ETV Bharat)

By ETV Bharat Karnataka Team

Published : Feb 17, 2025, 4:26 PM IST

ಬೆಂಗಳೂರು:''ಡಿ.ಕೆ. ಶಿವಕುಮಾರ್ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ'' ಎಂದು ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡುತ್ತಾ, ''ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಅಂತ ಎಐಸಿಸಿ ಹೆಸರನ್ನು ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪ ಅಲ್ಲ, ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ‌. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ'' ಎಂದು ವಾಗ್ದಾಳಿ ನಡೆಸಿದರು.

ಸಚಿವ ಕೆ.ಎನ್. ರಾಜಣ್ಣ (ETV Bharat)

ಅಂತಿಮ ನಿರ್ಧಾರ ಹೈಕಮಾಂಡ್ ಮಾಡುತ್ತೆ :''ನಾನು ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು, ದುಷ್ಪರಿಣಾಮ‌ ಬೀರುವ ಮಾತನಾಡಲ್ಲ. ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆವರೆಗೆ ಅಧ್ಯಕ್ಷ ಎಂಬ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು, ಈಗ ಕೇಳಲ್ಲ. ಡಿಕೆಶಿ ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯಲ್ಲ. ಎಚ್ಚರಿಕೆ ಎಲ್ಲಾ ಯಾರು ಕೇಳುತ್ತಾರೆ'' ಎಂದು ಗುಡುಗಿದರು.

ವೈಯಕ್ತಿಕವಾಗಿ ಏನೂ ಇಲ್ಲ, ವಿಚಾರ ಭೇದ ಇರಬಹುದು :''ನನಗೂ ಡಿ.ಕೆ.ಶಿವಕುಮಾರ್​​ಗೂ ವೈಯಕ್ತಿಕವಾಗಿ ಏನೂ ಇಲ್ಲ. ವಿಚಾರ ಭೇದ ಇರಬಹುದು ಅಷ್ಟೇ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ, ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಎಲ್ಲಾ ಮಾಡಿದ್ದೇವೆ. ವಿಚಾರ ಭೇದ ಅಷ್ಟೆ, ವೈಯಕ್ತಿಕ ಏನೂ ಇಲ್ಲ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ'' ಎಂದು ತಿಳಿಸಿದರು.

ಇದನ್ನೂ ಓದಿ:ಮಾರ್ಚ್​​ 7ರಂದು 2025-26ನೇ ಸಾಲಿನ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಹೈಕಮಾಂಡ್ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲೇಬೇಕು. ಏಕಪ್ರಕಾರವಾಗಿ ನಿರ್ಧಾರ ಏನು ಮಾಡಲ್ಲ. ನಾವು ತಪ್ಪು ಮಾಡಿದರೆ ಮಾತ್ರ ಎಚ್ಚರಿಕೆ ಕೊಡಬೇಕು. ನಾವೇನು ತಪ್ಪು ಮಾಡಿಲ್ಲ. ಹೈಕಮಾಂಡ್ ಎದುರು ನಾವು ಹೋಗುತ್ತಿಲ್ಲ. ಯಾರು ಕೂಡ ಹೈಕಮಾಂಡ್ ವಿರುದ್ಧ ಇಲ್ಲ'' ಎಂದರು.

ಜಿ.ಸಿ‌.ಚಂದ್ರಶೇಖರ್ ವಿರುದ್ಧ ವಾಗ್ದಾಳಿ : ''ಜಿ.ಸಿ‌. ಚಂದ್ರಶೇಖರ್ ಯಾರು, ಅವರ ಮಾತಿಗೆ ಇಷ್ಟು ಮನ್ನಣೆನಾ?. ಕೆಪಿಸಿಸಿ ಕಾರ್ಯಾಧ್ಯಕ್ಷ ಅಂದರೆ ಎರಡು ಕೊಂಬು ಇವೆಯಾ?. ಶಿಶುಪಾಲ ಅವರೇ, ನಾನು ಶ್ರೀಕೃಷ್ಣ. ನೋಡ್ರೀ, ದೆ ಆರ್ ಆಲ್ ಲಯಾಬಿಲಿಟಿ ಫಾರ್ ಪಾರ್ಟಿ. ಅವರ ಶಕ್ತಿ ಏನಿದೆ?. ಶಕ್ತಿ ಮೀರಿ ಅಧಿಕಾರ ಅನುಭವಿಸುತ್ತಿದ್ದಾರೆ. ಎರಡು ಬಾರಿ ಎಂಪಿ ಆಗಿ ಪಾರ್ಟಿಗೆ ಏನ್ ಶಕ್ತಿ ಕೊಟ್ಟಿದ್ದಾರೆ. ಅವರು ಏನ್, ಎತ್ತ ಅಂತಾ ಆತ್ಮವಿಮರ್ಶೆ ಮಾಡಿಕೊಂಡು ಮಾತಾಡಬೇಕು. ಕಾರ್ಪೋರೇಷನ್ ಎಲೆಕ್ಷನ್​​ನಲ್ಲಿ ಎಷ್ಟು ವೋಟು ತಗೊಂಡಿದ್ದರು. ತಪ್ಪು ಯಾರೇ ಮಾಡಲಿ, ಕ್ರಮ ಆಗಲಿ. ಕಾರ್ಯಾಧ್ಯಕ್ಷರಾದರೆ ಎರಡು ಕೊಂಡು ಇರುತ್ತಾ?'' ಎಂದು ರಾಜಣ್ಣ ಪ್ರಶ್ನಿಸಿದರು.

''ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕೋ ಹೇಳಿದ್ದೇನೆ. ಎಲ್ಲವನ್ನೂ ಬಹಿರಂಗ ಮಾಡಲು ಆಗಲ್ಲ. ಯಾರ ವಿರುದ್ಧವೂ ನಾವು ಸಮಾವೇಶ ಮಾಡುತ್ತಿಲ್ಲ. ಪಕ್ಷ ಸಂಘಟನೆಗೆ ಮಾಡುತ್ತಿದ್ದೇವೆ. ಸಮಯ ಸಂದರ್ಭ ಬಂದಾಗ ಸಮಾವೇಶ ಮಾಡುತ್ತೇವೆ. ಅದರ ದಿನಾಂಕ ಇನ್ನೂ ನಿರ್ಧಾರ ಆಗಿಲ್ಲ. ರಾಹುಲ್ ಗಾಂಧಿ ಹಾಗೂ ಖರ್ಗೆಯವರನ್ನು ಕರೆದು ಸಮಾವೇಶ ಮಾಡಲಾಗುವುದು. ಶೋಷಿತ ವರ್ಗಗಳ ಸಂಘಟನೆಗಾಗಿ ಸಮಾವೇಶ ಮಾಡುತ್ತೇವೆ'' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಹಿಂದೆ ಬಿಜೆಪಿ ಮುಖ್ಯಮಂತ್ರಿಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟ್​​ಗಾ : ಡಿ.ಕೆ.ಶಿವಕುಮಾರ್ ತಿರುಗೇಟು

ABOUT THE AUTHOR

...view details