ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂಗೆ ಹು-ಧಾ ಪಾಲಿಕೆ ಮೇಯರ್, ಉಪಮೇಯರ್ ಮನವಿ - appeal to CM siddaramaiah - APPEAL TO CM SIDDARAMAIAH

ವಿವಿಧ ಬೇಡಿಕೆ ಈಡೇರಿಸುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸಿಎಂಗೆ ಹು -ಧಾ ಪಾಲಿಕೆ ಮೇಯರ್, ಉಪಮೇಯರ್ ಮನವಿ
ಸಿಎಂಗೆ ಹು -ಧಾ ಪಾಲಿಕೆ ಮೇಯರ್, ಉಪಮೇಯರ್ ಮನವಿ (ETV Bharat)

By ETV Bharat Karnataka Team

Published : Aug 30, 2024, 6:12 PM IST

ಹುಬ್ಬಳ್ಳಿ:ವಿವಿಧ ಬೇಡಿಕೆ ಈಡೇರಿಸುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಹಾಗೂ ಉಪಮೇಯರ್ ದುರ್ಗಮ್ಮ‌ ಬಿಜವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಬ್ಬಳ್ಳಿ ವಿಮಾನ‌ ನಿಲ್ದಾಣದಲ್ಲಿ ಮನವಿ ಸಲ್ಲಿಸಿದರು.

ಮನವಿಯಲ್ಲಿರುವ ಅಂಶಗಳೇನು?:

1. ಆಸ್ತಿಕರ: ಈಗಾಗಲೇ ಬೆಂಗಳೂರಿನಲ್ಲಿ ಬಿಬಿಎಮ್​ಪಿ ಒನ್​ ಟೈಮ್ ಸೆಟ್ಲ್‌ಮೆಂಟ್ (ಒಟಿಎಸ್) ಮಾಡಿ ಕರದಾತರಿಗೆ ಅನುಕೂಲ ಮಾಡಿಕೊಟ್ಟ ಮಾನದಂಡದ ಪ್ರಕಾರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನ್ವಯ ಮಾಡಲು ತಾವು ಆದೇಶ ಮಾಡಿ ಅನುಕೂಲ ಮಾಡಿದರೆ ಪಾಲಿಕೆಗೆ ಹೆಚ್ಚಿನ ಆದಾಯ ಕ್ರೋಢೀಕರಿಸಬಹುದು.

2. ನೀರಿನ ಕರ: ನೀರಿನ ಕರ ಬಾಕಿ ವಸೂಲಾತಿ ಈಗಾಗಲೇ ಸರ್ಕಾರ ಒನ್​ ಟೈಮ್ ಸೆಟ್ಲ್‌ಮೆಂಟ್ (ಒಟಿಎಸ್) ಮಾಡಿ ವ್ಯವಸ್ಥೆ ಮಾಡಿ ಆದೇಶಿತ್ತು. ಇದರಿಂದ ಬಹಳಷ್ಟು ಕರದಾತರಿಗೆ ನೀರಿನಕರ ಕಟ್ಟಲು ಅನುಕೂಲವಾಗಿದೆ. ಅದನ್ನು ಇನ್ನೊಂದು ಬಾರಿ ಮರು ಜಾರಿ ಮಾಡಲು ಪಾಲಿಕೆಯ ಠರಾವು ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದನ್ನು ಮಂಜೂರು ಮಾಡಬೇಕು.

3.ಪಿಂಚಣಿ ಹಣ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೌಕರರ 58 ಕೋಟಿ ರೂ. ಪಿಂಚಣಿ ಹಣ ಸಮಾರು ವರ್ಷಗಳಿಂದ ಬಿಡುಗಡೆ ಮಾಡುವುದು ಬಾಕಿ ಇದೆ. ಸದರಿ ಕಡತ ಸರ್ಕಾರದ ಬಳಿ ಇರುತ್ತದೆ. ತಾವು ಬೇಗನೇ ಪಿಂಚಣಿ ಹಣ ಬಿಡುಗಡೆ ಮಾಡಬೇಕು.

4. ಸಭಾಭವನ ಕಟ್ಟಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಸಂಖ್ಯೆ ಹೆಚ್ಚಿಗೆ ಆದ ಕಾರಣ ಸಭಾಭವನದಲ್ಲಿ ಸದಸ್ಯರುಗಳಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ಸಭೆಯಲ್ಲಿ ಕುಳಿತುಕೊಳ್ಳಲು ಸ್ಥಳ ಕೊರತೆ ಇರುತ್ತದೆ. ಇದನ್ನು ಅರಿತು ಹೊಸದಾಗಿ ಸಭಾಭವನ ಕಟ್ಟಲು ನೀಲಿ ನಕ್ಷೆ ತಯಾರಿಸಿದ್ದು, ಸರ್ಕಾರಕ್ಕೆ 30 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದೆ. ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕು.

5. ನಗರೋತ್ಥಾನ: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಬಿಡುಗಡೆಯಾದ ಹಣದಲ್ಲಿ ಇನ್ನು 48 ಕೋಟಿ ಅನುದಾನ ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಅದನ್ನು ಬಿಡುಗಡೆ ಮಾಡಬೇಕು.

6. ಸದಸ್ಯರ ಗೌರವಧನ: ಚುನಾಯಿತ ಪ್ರತಿನಿಧಿಗಳ ಗೌರವಧನ ಅತ್ಯಂತ ಕಡಿಮೆ ಇದೆ. ಎಲ್ಲಾ ಸದಸ್ಯರ ಗೌರವಧನ ಹೆಚ್ಚಿಸಲು ಈಗಾಗಲೇ ಪಾಲಿಕೆಯ ಘನ ಸಭೆಯಲ್ಲಿ ಚರ್ಚಿಸಿ ಠರಾವು ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ಅನುಮೋದಿಸಿ ಜಾರಿಗೆ ತರುವ ವ್ಯವಸ್ಥೆ ಮಾಡಬೇಕು.

7. ಲೀಸ್​ ಆಸ್ತಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 2745 ಲೀಸ್ ಆಸ್ತಿಗಳು ಇವೆ. ಸರ್ಕಾರದಿಂದ 2013 ರಲ್ಲಿ ಒಂದು ಸುತ್ತೋಲೆ ಇದ್ದು ಅದರ ಪ್ರಕಾರ ಲೀಸ್​ ಆಸ್ತಿಗಳನ್ನು ಭೂ ಬಾಡಿಗೆ ಮುಂದುವರಿಸುವುದು / ಮಾರುವುದರ ಬಗ್ಗೆ ಪಾಲಿಕೆಯಿಂದ ಸಭೆಯಯಲ್ಲಿ ಠರಾವು ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಬಗ್ಗೆ ಸರ್ಕಾರ ಮಟ್ಟದಲ್ಲಿ ಗಮನ ಹರಿಸಬೇಕು.

8. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 100 ಕೋಟಿ ರೂ ಹಣ 1, 2 & 3 ನೇ ಹಂತದಲ್ಲಿ ಬಿಡುಗಡೆಯಾಗಿದೆ. ಇನ್ನೂ 54 ಕೋಟಿ ಹಣ ಬಿಡುಗಡೆಯಾಗಿಲ್ಲ. ಅದನ್ನು ಬಿಡುಗಡೆ ಮಾಡಲು ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದನ್ನು ಬಿಡುಗಡೆ ಮಾಡುವ ವ್ಯವಸ್ಥೆ ಮಾಡಬೇಕು.

9. ಘನತಾಜ್ಯ ನಿರ್ವಹಣೆ: ಹುಬ್ಬಳ್ಳಿ-ಧಾರವಾಡಲ್ಲಿ ಘನತಾಜ್ಯ ನಿರ್ವಹಣೆಗೆ ಪೌರಕಾರ್ಮಿಕರ ಕೊರತೆ ಇದೆ. 799 ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತ ಕಡತ ವಿಲೇವಾರಿ ಮಾಡಿಸಬೇಕು.

ಈ ‌ಮನವಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details