ಕರ್ನಾಟಕ

karnataka

ETV Bharat / state

ಲೋಕಾಯುಕ್ತ ದಾಳಿ: 14 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಬಳ್ಳಾರಿ ಪಾಲಿಕೆ ಅಧಿಕಾರಿಗಳು ವಶಕ್ಕೆ - Lokayukta raid - LOKAYUKTA RAID

ನಾಲ್ಕು ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣಕ್ಕೆ ಅನುಮತಿಸಲು 14 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳನ್ನು ಲೋಕಾಯುಕ್ತ ವಶಕ್ಕೆ ಪಡೆದಿದೆ.

ಲೋಕಾಯುಕ್ತ ದಾಳಿ
ಲೋಕಾಯುಕ್ತ ದಾಳಿ (ETV Bharat)

By ETV Bharat Karnataka Team

Published : Jul 6, 2024, 4:33 PM IST

ಬಳ್ಳಾರಿ: ಲೇಔಟ್ ನಿರ್ಮಾಣಕ್ಕೆ ಅನುಮತಿಸಲು 14 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳನ್ನು ಲೋಕಾಯುಕ್ತ ವಶಕ್ಕೆ ಪಡೆದಿದೆ.

ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡಲು 14 ಲಕ್ಷ ಹಣ ಕೊಡುವಂತೆ ಪಾಲಿಕೆಯ ಇಂಜಿನಿಯರ್ ಮಹಾದೇವ, ಜೆಇ ವಿರೂಪಾಕ್ಷ ಹಾಗೂ ಕೇಸ್ ವರ್ಕರ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪ್ರಕಾಶ್ ರಾವ್ ಎಂಬುವರು ನಾಲ್ಕು ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡುವುದಕ್ಕೆ 14 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ದೂರಿನ ಜೊತೆ ಅಧಿಕಾರಿಗಳ ಆಡಿಯೋವನ್ನೂ ಲೋಕಾಯುಕ್ತರಿಗೆ ನೀಡಿದ್ದರು.

ಪ್ರಕಾಶ್ ರಾವ್ ದೂರಿನನ್ವಯ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಗೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ತಂಡ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

ಇದನ್ನೂ ಓದಿ:ಬೆಳಗಾವಿ:ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿ ತಾ.ಪಂ ಇಒ, ಕಾರ್ಯದರ್ಶಿ - Lokayukta raid

ABOUT THE AUTHOR

...view details