ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಆಸ್ತಿ ಮೌಲ್ಯ '0': ಆದರೆ, ಪತ್ನಿಯ ಹೆಸರಲ್ಲಿ! - D T Srinivas Asset - D T SRINIVAS ASSET

ಜೂನ್ 3ರಂದು ಆರು ವಿಧಾನ ಪರಿಷತ್ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಜೂನ್ 4ರಂದು ಎಣಿಕೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಡಿ.ಟಿ.ಶ್ರೀನಿವಾಸ್ ನಾಮಪತ್ರ ಸಲ್ಲಿಕೆ
ಡಿ.ಟಿ.ಶ್ರೀನಿವಾಸ್ ನಾಮಪತ್ರ ಸಲ್ಲಿಕೆ (ETV Bharat)

By ETV Bharat Karnataka Team

Published : May 14, 2024, 8:13 AM IST

ಬೆಂಗಳೂರು: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಯಾವುದೇ ಆಸ್ತಿ ಹೊಂದಿಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ತಮ್ಮ ಬಳಿ ಯಾವುದೇ ಸ್ಥಿರಾಸ್ತಿ, ಚರಾಸ್ತಿ ಇಲ್ಲ. ಯಾವುದೇ ವಾಹನ, ಚಿನ್ನಾಭರಣ, ಬ್ಯಾಂಕ್ ಠೇವಣಿಯನ್ನೂ ಹೊಂದಿಲ್ಲ. ಹಾಗೆಯೇ ಸಾಲವೂ ಇಲ್ಲ ಎಂದು ವಿವರ ಸಲ್ಲಿಸಿದ್ದಾರೆ.

ಪತ್ನಿಯ ಹೆಸರಿನಲ್ಲಿ 80.91 ಕೋಟಿ ರೂ.‌ ಆಸ್ತಿ: ಆದರೆ, ಡಿ.ಟಿ.ಶ್ರೀನಿವಾಸ್ ಪತ್ನಿ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒಟ್ಟು 80.91 ಕೋಟಿ ರೂ.‌ ಆಸ್ತಿ ಹೊಂದಿದ್ದಾರೆ.‌ ಕುಟುಂಬದ ಹೆಸರಲ್ಲಿ ಸುಮಾರು 35.44 ಕೋಟಿ ರೂ. ಆಸ್ತಿ ಇದೆ. ಮಕ್ಕಳ ಬಳಿ ಸುಮಾರು 24.13 ಕೋಟಿ ರೂ.‌ ಆಸ್ತಿ ಇರುವುದಾಗಿ ಅಫಿಡವಿಟ್​​ನಲ್ಲಿ ಮಾಹಿತಿ ನೀಡಿದ್ದಾರೆ.

ಡಿ.ಟಿ.ಶ್ರೀನಿವಾಸ್ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಶಿಕ್ಷಣ ತಜ್ಞರಾಗಿರುವ ಅವರು MBA, MA, BE (civil) ವಿದ್ಯಾರ್ಹತೆ ಹೊಂದಿರುವುದಾಗಿ ತಿಳಿಸಿದ್ದಾರೆ.

ರಾಮೋಜಿ ಗೌಡ ಆಸ್ತಿ ವಿವರ:ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಮೋಜಿ ಗೌಡ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಒಟ್ಟು 45.41 ಕೋಟಿ ರೂ. ಆಸ್ತಿಯ ಒಡೆಯ.

ಇವರಿಗೆ 9.19 ಕೋಟಿ ರೂ.‌ ಮೌಲ್ಯದ ಚರಾಸ್ತಿ ಇದ್ದರೆ, 36.22 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 12.45 ಕೋಟಿ ರೂ. ಸ್ಥಿರಾಸ್ತಿ ಇದ್ದರೆ, 1.03 ಕೋಟಿ ರೂ. ಚರಾಸ್ತಿಯಿದೆ. ರಾಮೋಜಿ ಗೌಡ ಸುಮಾರು 14.31 ಕೋಟಿ ರೂ. ಒಟ್ಟು ಸಾಲ ಹೊಂದಿದ್ದಾರೆ.

ಇದನ್ನೂ ಓದಿ:ಲೋಕಸಭೆ ಮಾದರಿಯಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ: ಡಿಸಿಎಂ ಡಿಕೆಶಿ - Council Election

ಉತ್ತರ ಪ್ರದೇಶದಲ್ಲಿ MA ವಿದ್ಯಾಭ್ಯಾಸ ಪೂರೈಸಿ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾಗಿರುವ ರಾಮೋಜಿ ಗೌಡ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಇದೀಗ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿರುವುದಾಗಿ ಅಫಿಡವಿಟ್​​ನಲ್ಲಿ ತಿಳಿಸಿದ್ದಾರೆ.

ಈಶಾನ್ಯ ಪದವೀಧರ, ನೈಋತ್ಯ ಪದವೀಧರ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂನ್​ 3ರಂದು ಚುನಾವಣೆ ನಡೆಯಲಿದೆ. ಮೇ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮೇ 16. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಈ ಆರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 6ರಂದು ಫಲಿತಾಂಶ ಹೊರಬರಲಿದೆ.

ಇದನ್ನೂ ಓದಿ:ಲೋಕಸಭೆ ಮಾದರಿಯಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ: ಡಿಸಿಎಂ ಡಿಕೆಶಿ - Council Election

ABOUT THE AUTHOR

...view details