ಬೆಂಗಳೂರು: ನಿರಂತರ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ನೋಡೋಣ.
ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ:
- ಗರಿಷ್ಠ ಮಟ್ಟ: 2079.50 ಅಡಿ
- ಒಟ್ಟು ಸಾಮರ್ಥ್ಯ: 37.731 ಟಿಎಂಸಿ
- ಇಂದಿನ ನೀರಿನ ಮಟ್ಟ: 30.574 ಟಿಎಂಸಿ (2074.10 ಅಡಿ)
- ಒಳ ಹರಿವು: 7,707 ಕ್ಯೂಸೆಕ್
- ಹೊರ ಹರಿವು: 3,594 ಸಾವಿರ ಕ್ಯೂಸೆಕ್
ಘಟಪ್ರಭಾ ನದಿ, ಹಿಡಕಲ್ ಜಲಾಶಯ:
- ಗರಿಷ್ಠ ಮಟ್ಟ: 2175 ಅಡಿ
- ಒಟ್ಟು ಸಾಮರ್ಥ್ಯ: 51 ಟಿಎಂಸಿ
- ಇಂದಿನ ನೀರಿನ ಮಟ್ಟ: 47.155 ಟಿಎಂಸಿ (2170.083 ಅಡಿ)
- ಒಳ ಹರಿವು: 38,012 ಕ್ಯೂಸೆಕ್
- ಹೊರ ಹರಿವು: 35,721 ಕ್ಯೂಸೆಕ್
ಕಬಿನಿ ಜಲಾಶಯ:
- ಗರಿಷ್ಠ ಮಟ್ಟ: 2284 ಅಡಿ (ಅಡಿ)
- ಇಂದಿನ ಮಟ್ಟ: 2284.00 ಅಡಿ (ಅಡಿ)
- ಒಳಹರಿವು: 30805 ಕ್ಯೂಸೆಕ್
- ಹೊರ ಹರಿವು: 24667 ಕ್ಯೂಸೆಕ್
ಕೆಆರ್‌ಎಸ್ ಜಲಾಶಯ:
- ಗರಿಷ್ಠ ಮಟ್ಟ: 124 ಅಡಿ (ಅಡಿ)
- ಇಂದಿನ ಮಟ್ಟ: 123.75 ಅಡಿ(ಅಡಿ)
- ಒಳಹರಿವು: 38,977 ಕ್ಯೂಸೆಕ್
- ಹೊರ ಹರಿವು: 55,659 ಕ್ಯೂಸೆಕ್
ಆಲಮಟ್ಟಿ ಜಲಾಶಯ:
- ಗರಿಷ್ಠ ನೀರಿನ ಮಟ್ಟ: 123.081 ಟಿಎಂಸಿ
- ಇಂದಿನ ನೀರಿನ ಮಟ್ಟ: 67.859 ಟಿಎಂಸಿ
- ಒಟ್ಟು ಎತ್ತರ: 519.60 ಮೀಟರ್
- ಇಂದಿನ ನೀರಿನ ಪ್ರಮಾಣ: 515.50 ಮೀಟರ್
- ಇಂದಿನ ನೀರಿನ ಒಳ ಹರಿವು: 3,02,573 ಕ್ಯೂಸೆಕ್
- ಇಂದಿನ ನೀರಿನ ಹೊರ ಹರಿವು: 3,02,573 ಕ್ಯೂಸೆಕ್
ಇದನ್ನೂ ಓದಿ:ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ - Bagina To Kabini Dam
ಬಾಗಿನ ಅರ್ಪಣೆ: ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್‌ಎಸ್ ಮತ್ತು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಿಚ್ಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರುಗಳು ಸೋಮವಾರ ಬಾಗಿನ ಅರ್ಪಿಸಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, "ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಬೇರೆ ಸರ್ಕಾರವಿದ್ದಾಗ ಗೋಲಿಬಾರ್ ನಡೆದು ರೈತರು ಪ್ರಾಣ ಕಳೆದುಕೊಂಡಿದ್ದಾರೆ" ಎಂದರು.
"ತಮಿಳುನಾಡಿಗೆ ನೀರು ಬಿಡಬೇಕಾಗಿ ಬಂದಾಗ ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ" ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ:ಘಟಪ್ರಭಾ ಆರ್ಭಟಕ್ಕೆ ಬೆಚ್ಚಿ ಬಿದ್ದ ಗೋಕಾಕ್: ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸಂತ್ರಸ್ತರು - rain effect in belagavi
ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಮೈದುಂಬಿ ಹರಿಯುತ್ತಿದ್ದು, 40ಕ್ಕೂ ಅಧಿಕ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಸುಮಾರು 40 ಗ್ರಾಮಗಳಲ್ಲಿ ಈ ಸಪ್ತ ನದಿಗಳ ಪ್ರವಾಹದಿಂದ ಜನರು ಅತಂತ್ರರಾಗಿದ್ದಾರೆ. 38 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 6 ಸಾವಿರಕ್ಕೂ ಅಧಿಕ ಜನರು ಆಶ್ರಯ ಪಡೆದಿದ್ದಾರೆ. ಅಲ್ಲದೇ ಸಂಬಂಧಿಕರ ಮನೆಗಳಿಗಳಲ್ಲೂ ಕೆಲವು ಸಂತ್ರಸ್ಥರು ವಾಸ್ತವ್ಯ ಹೂಡಿದ್ದಾರೆ.