ದಾವಣಗೆರೆ : ಬರದ ನಾಡು ಜಗಳೂರು ಕೆರೆಗೆ ತುಂಗಭದ್ರಾ ನದಿ ನೀರು ಹರಿದಿದೆ. ಐದು ದಶಕಗಳ ಹೋರಾಟಕ್ಕೆ ಕೆರೆ ಅಂಗಳದಲ್ಲಿ ತುಂಗಭದ್ರೆ ನೀರು ಚಿಮ್ಮಿದೆ. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರು, ರೈತರ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಸಾಕಷ್ಟು ವರ್ಷಗಳ ಕಾಲ ನೀರಿಲ್ಲದೇ ಭಣಗುಡುತ್ತಿದ್ದ ಕೆರೆಗೆ ನೀರು ಹರಿದಿದ್ದು, ಕೆರೆ ಮೈದುಂಬಿದೆ.
ಜನಸಾಮಾನ್ಯರು ಕೆರೆಯನ್ನು ನೋಡಲು ಮಕ್ಕಳೊಂದಿಗೆ ಧಾವಿಸುತ್ತಿದ್ದಾರೆ. ಅಲ್ಲದೇ ಕೆಲವರು ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಇನ್ನು ಕೆಲವರು ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಕೆರೆ ಜಗಳೂರು ಪಟ್ಟಣದ ಕೂಗಳತೆಯಲ್ಲಿದೆ. ಹರಿಹರ ತಾಲೂಕಿನ ದಿಟೂರ ಬಳಿಯ ತುಂಗಭದ್ರಾ ನದಿ ಜಾಕ್ ವೆಮ್ನಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಜಗಳೂರು ಕೆರೆಗೆ ನೀರು ಹರಿದಿದೆ.