ಕರ್ನಾಟಕ

karnataka

ETV Bharat / state

ಹಾವೇರಿ, ದಾವಣಗೆರೆ, ಚಿಕ್ಕಮಗಳೂರಿನ ಹಲವೆಡೆ ಜೋರು ಮಳೆ - Karnataka Rainfall - KARNATAKA RAINFALL

ಹಾವೇರಿ, ದಾವಣಗೆರೆ ಹಾಗೂ ಚಿಕ್ಕಮಗಳೂರಿನ ವಿವಿಧೆಡೆ ಶುಕ್ರವಾರ ಭಾರಿ ಮಳೆ ಸುರಿದಿದೆ.

heavy-rainfall-continued-in chikkamagaluru
ರಾಜ್ಯದ ಹಲವೆಡೆ ಭಾರಿ ಮಳೆ (ETV Bharat)

By ETV Bharat Karnataka Team

Published : Jun 7, 2024, 9:23 PM IST

ಹಾವೇರಿ, ದಾವಣಗೆರೆಯಲ್ಲಿ ಭಾರಿ ಮಳೆ (ETV Bharat)

ಹಾವೇರಿ:ಜಿಲ್ಲೆಯ ವಿವಿಧೆಡೆ ಶುಕ್ರವಾರ ಧಾರಾಕಾರ ಮಳೆ ಸುರಿಯಿತು. ಹಳೆ ಪಿ.ಬಿ.ರಸ್ತೆಯ ಎಸ್ಪಿ ಕಚೇರಿ, ಐಬಿ ಮುಂದಿನ ಚರಂಡಿ ತುಂಬಿ ಹರಿಯಿತು. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದರು. ರಾಜಕಾಲುವೆ ಒತ್ತುವರಿಯಿಂದ ಈ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಹಾವೇರಿ ನಗರದ ಕೆಳಸೇತುವೆಯಲ್ಲಿ ಮಳೆನೀರು ನಿಂತು ವಾಹನ ಸವಾರರಿಗೆ ಅಡಚಣೆಯಾಯಿತು. ಯಲಗಚ್ಚ, ಕರ್ಜಿಗಿ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರೈತರಿಗೆ ಸಂತಸ ತಂದಿದೆ.

ದಾವಣಗೆರೆ ಮಳೆ ವರದಿ:ಸುಮಾರು ಒಂದು ಗಂಟೆ ಎಡೆಬಿಡದೆ ಸುರಿದ ಮಳೆಗೆ ನಗರದ ರಸ್ತೆಗಳು ನದಿಯಂತಾದವು. ಹೀಗಾಗಿ ವಾಹನ ಸವಾರರಿಗೆ ತೊಂದರೆಯಾಯಿತು. ಈರುಳ್ಳಿ ಮಾರುಕಟ್ಟೆ ಬಳಿ ಇರುವ ಸೇತುವೆ ಜಲಾವೃತವಾಯಿತು. ಸೇತುವೆ ಕೆಳಗೆ ನೀರು ಶೇಖರಣೆಯಾಗಿದ್ದರಿಂದ ಬಸ್ ಮುಂದೆ ಚಲಿಸಲಾಗದೇ ಅರ್ಧದಲ್ಲೇ ನಿಂತಿತ್ತು. ಇದಲ್ಲದೆ ಸಾಕಷ್ಟು ವಾಹನಗಳು ಮಳೆ ನೀರಿನಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು.

ಈ ಸೇತುವೆ ಬಳಿ ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಮಳೆ ನೀರಿನ ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳಿಗೆ ಆಗಿಲ್ಲ ಎಂಬುದು ಸಾರ್ವಜನಿಕರ ದೂರು. ಇದಲ್ಲದೆ ಹಳೇ ಪೇಟೆಯಲ್ಲೂ ಭಾರಿ ಮಳೆಯಾಗಿದ್ದರಿಂದ ರಸ್ತೆಯ ತುಂಬೆಲ್ಲಾ ನೀರು ಹರಿಯುತ್ತಿತ್ತು.

ಚಿಕ್ಕಮಗಳೂರು ಮಳೆ ವರದಿ: ಬಯಲು ಸೀಮೆ ಭಾಗದಲ್ಲಿ ಇಂದು ಮಳೆಯ ಅಬ್ಬರ ಮುಂದುವರೆಯಿತು. ಚಿಕ್ಕಮಗಳೂರು, ಚಿತ್ರದುರ್ಗ ಗಡಿಭಾಗದಲ್ಲಿ ವರುಣನ ಅಬ್ಬರಕ್ಕೆ ರಸ್ತೆ ಸಂಚಾರ ಬಂದ್ ಆಗಿ, ಹಳ್ಳಗಳು ಭರ್ತಿಯಾದವು. ಹರಳಹಳ್ಳಿ ಗುಡ್ಡದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಚಿಕ್ಕಮಗಳೂರಿನ ಹಲವೆಡೆ ಭಾರಿ ಮಳೆ (ETV Bharat)

ಹರಳಹಳ್ಳಿ ಹೊಳಲ್ಕೆರೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಅಜ್ಜಂಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಭಾರಿ ಮಳೆಯಾಗಿದೆ. ಈ ಭಾಗದಲ್ಲಿ ಕಳೆದ ಎರಡು ಮೂರು ವರ್ಷದಿಂದ ಸರಿಯಾಗಿ ಮಳೆಯಾಗಿರಲಿಲ್ಲ. ಹನಿ ಹನಿ ನೀರಿಗೂ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯಿದ ನಿಧಾನವಾಗಿ ಕೆರೆ-ಕಟ್ಟೆಗಳು ತುಂಬುತ್ತಿವೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ - Chikkamagaluru Rains

ABOUT THE AUTHOR

...view details