ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ರಾಜ್ಯ ಸರ್ಕಾರ ಅವಕಾಶ ಕೊಡಬಾರದು: ಕೆ. ಎಸ್.‌ ಈಶ್ವರಪ್ಪ - K S Eshwarappa - K S ESHWARAPPA

ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಹೇಳಿದರು.

ಕೆ.ಎಸ್.‌ ಈಶ್ವರಪ್ಪ
ಕೆ.ಎಸ್.‌ ಈಶ್ವರಪ್ಪ (ETV Bharat)

By ETV Bharat Karnataka Team

Published : May 26, 2024, 3:52 PM IST

Updated : May 26, 2024, 4:55 PM IST

ಕೆ. ಎಸ್.‌ ಈಶ್ವರಪ್ಪ (ETV Bharat)

ಬಾಗಲಕೋಟೆ:ಪೆನ್​ಡ್ರೈವ್‌ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವ ಪ್ರಕರಣವಾಗಿದೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ದೂರಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ. ನಾವು ಮನವಿ ಮಾಡಿದರೂ ಪ್ರಜ್ವಲ್​ ಪಾಸ್​ಪೋರ್ಟ್​ ರದ್ದು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಪೆನ್‌ ಡ್ರೈವ್‌ ಪ್ರಕರಣವನ್ನು ರಾಜ್ಯ ಸರ್ಕಾರ ಏಕೆ ಸಿಬಿಐಗೆ ಕೊಡುತ್ತಿಲ್ಲ?. ಈಗ ರಾಜ್ಯದಲ್ಲಿ ನಡೆದಿರುವ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಇತಿಹಾಸದಲ್ಲಿ ಈ ಹಿಂದೆ ಎಂದೂ ನಡೆದಿರಲಿಲ್ಲ. ನಾನು ಪೆನ್​ಡ್ರೈವ್​ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ತರಲು ರಾಜ್ಯ ಸರ್ಕಾರ ಅವಕಾಶ ಕೊಡಬಾರದು. ಚುನಾಯಿತ ಸರ್ಕಾರವೇ ಮುಂದುವರೆಯಬೇಕು. ಸರ್ಕಾರ ನಿರ್ದೋಷಿ ಆಗಬೇಕಾದ್ರೆ ರಾಜ್ಯದಲ್ಲಿ ಇತ್ತೀಚಿಗೆ ನಡೆದ ಪ್ರಕರಣಗಳನ್ನು ಸಿಬಿಐಗೆ ಕೊಡಬೇಕು ಎಂದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಾನು ಡಿ. ಕೆ. ಶಿವಕುಮಾರ್ ಅವರು ಪೆನ್ ಡ್ರೈವ್ ಫ್ಯಾಕ್ಟರಿ ಮಾಲೀಕ ಅಂತ ಹೇಳಲ್ಲ. ಮಾನ್ಯ ಕುಮಾರಸ್ವಾಮಿ ಅವರ ದೊಡ್ಡ ಪಾತ್ರ ಇದೆ ಅಂತಾನೂ ಹೇಳಲ್ಲ. ನಾನು ಡಿ.ಕೆ. ಶಿವಕುಮಾರ ಬಗ್ಗೆನೂ ಆಪಾದನೆ ಮಾಡಲ್ಲ. ಕುಮಾರಸ್ವಾಮಿ ಬಗ್ಗೆನೂ ಆಪಾದನೆ ಮಾಡಲ್ಲ. ನೀವು ಇಬ್ಬರು ಕೂಡ ಒಳ್ಳೆಯವರೇ. ಇಂತಹ ಪರಿಸ್ಥಿತಿ ನಮ್ಮ ರಾಜ್ಯದ ಇತಿಹಾಸದಲ್ಲಿ ಈ ಹಿಂದೆ ಎಂದೂ ಬಂದಿರಲಿಲ್ಲ. ಅದಕ್ಕೆ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

ರಾಯಣ್ಣ ಬ್ರಿಗೇಡ್ ಕುರಿತು ಮಾತನಾಡಿದ ಈಶ್ವರಪ್ಪ, ಅನೇಕರು ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಿದ್ದಾರೆ. ಹಿಂದುಳಿದವರು, ದಲಿತರು ಎಲ್ಲ ಸಮಾಜ ಸೇರಿಸಿ ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಾ ಹೇಳ್ತಿದ್ದಾರೆ. ಚುನಾವಣೆ ಮುಗಿದ ನಂತರ ನೋಡೋಣ. ಏನು ಮಾಡಬೇಕು ಅಂತಾ ನಾನೊಬ್ಬನೇ ತೀರ್ಮಾನ ತಗೊಳ್ಳಲ್ಲ. ಚುನಾವಣೆಗೆ ನಿಲ್ಲಬೇಕಾದರೂ ನನ್ನದೊಬ್ಬನದೇ ನಿರ್ಧಾರ ಆಗಿರಲಿಲ್ಲ. ಯಾರು ಈ ಪಕ್ಷ, ಹಿಂದುತ್ವ ಉಳಿಯಬೇಕು ಅಂತಿದ್ದಾರೋ, ಅಪ್ಪ ಮಕ್ಕಳಿಂದ ಪಕ್ಷ ಮುಕ್ತವಾಗಬೇಕು ಅಂತಿದ್ದಾರೋ ಅವರೆಲ್ಲರ ಅವರ ಅಭಿಪ್ರಾಯ ತಗೊಂಡು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಚುನಾವಣೆ ಮುಗಿದ ನಂತರ ಯಾರ‍್ಯಾರು ಈ ಭಾವನೆಯಲ್ಲಿದ್ದಾರೋ ರಾಜ್ಯದಲ್ಲಿರುವ ಎಲ್ಲ ಹಿತೈಷಿಗಳನ್ನ ಒಂದು ಕಡೆ ಸೇರಿಸುತ್ತೇನೆ. ಇದು ಚುನಾವಣೆ ಮುಗಿದು ಮಾರನೇ ದಿನವೇ ಆಗೊಲ್ಲ. ನಾನು ಥಟ್​ ಅಂತಾ ಯಾವುದೇ ತೀರ್ಮಾನ ತಗೊಳ್ಳಲ್ಲ, ಎಲ್ಲರ ಅಭಿಪ್ರಾಯದ ಮೇಲೆ ಮುಂದಿನ ನಿರ್ಧಾರ ತೆಗೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ, ಯಾರೇ ತಪ್ಪು ಮಾಡಿದರೂ ಕ್ರಮ: ಪರಮೇಶ್ವರ್ - G Parameshwara

Last Updated : May 26, 2024, 4:55 PM IST

ABOUT THE AUTHOR

...view details