ಕರ್ನಾಟಕ

karnataka

ETV Bharat / state

ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಪರಿಶೀಲನೆಗಾಗಿ ಆರು ಮಂದಿ ಒಳಗೊಂಡ ತಜ್ಞರ ಸಮಿತಿ ರಚನೆ

ಮಂಡ್ಯ ಕೃಷಿ ವಿವಿ ಸ್ಥಾಪನೆ ಪರಿಶೀಲನೆಗಾಗಿ ಆರು ಮಂದಿ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

Vidhanasouda
ವಿಧಾನಸೌಧ

By ETV Bharat Karnataka Team

Published : Mar 15, 2024, 5:25 PM IST

ಬೆಂಗಳೂರು : ಮಂಡ್ಯ ಜಿಲ್ಲೆಯ ವಿ. ಸಿ ಫಾರ್ಮ್​ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಪರಿಶೀಲನೆಗಾಗಿ ಆರು ಮಂದಿಯನ್ನೊಳಗೊಂಡ ತಜ್ಞರ ಸಮಿತಿ ರಚಿಸಿ‌ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ ಪಿ. ಎಲ್ ಪಾಟೀಲ್, ಬೆಂಗಳೂರು ಕೃಷಿ ವಿ.ವಿ ನಿವೃತ್ತ ಕುಲ ಸಚಿವರಾದ ಡಾ. ಎ. ಬಿ ಪಾಟೀಲ್, ಬೆಂಗಳೂರು ಕೃಷಿ ವಿವಿ ನಿವೃತ್ತ ಆಡಳಿತಾಧಿಕಾರಿ ಡಾ. ಕೆ. ಎಂ ಹರಿಣಿಕುಮಾರ್ ಆಡಳಿತ ಸುಧಾರಣಾ ಇಲಾಖೆಯ ನಿವೃತ್ತ ಜಂಟಿ ಕಾರ್ಯದರ್ಶಿ ಚಂದ್ರಹಾಸ್ ಜಿ ತಾಳೂಕರ ಅವರುಗಳು ಸಮಿತಿಯ ಸದಸ್ಯರಾಗಿದ್ದಾರೆ.

ಧಾರವಾಡ ಕೃಷಿ ವಿ. ವಿ ಶೈಕ್ಷಣಿಕ ನಿರ್ದೇಶಕ ಡಾ. ವಿ ಆರ್ ಕಿರೇಸೂರ್ ಅವರನ್ನು ಸದಸ್ಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ಮಂಡಿಸಿದ ಬಜೆಟ್​ನಲ್ಲಿ ಮಂಡ್ಯ ವಿ.ಸಿ ಫಾರ್ಮ್​ನಲ್ಲಿ ಕೃಷಿ ವಿವಿ ಸ್ಥಾಪನೆ ಕುರಿತು ಪರಿಶೀಲನೆಗೆ ತಜ್ಞರ ಸಮಿತಿ ರಚಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇದರ ಬಗ್ಗೆ ಗಮನಹರಿಸಿ ತಜ್ಞರ ಸಮಿತಿ ರಚನೆಯಾಗುವಂತೆ ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ :ಬೆಳೆದ ಉತ್ಪನ್ನ ಮಾರಾಟದ ಕೌಶಲ್ಯತೆ ರೈತರು ಬೆಳೆಸಿಕೊಳ್ಳಬೇಕು: ವಿಶ್ರಾಂತ ಕುಲಪತಿ ಚಂಗಪ್ಪ

ABOUT THE AUTHOR

...view details