ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತದಲ್ಲಿ ಫುಟ್‌ಬಾಲ್‌ ಆಟಗಾರನ ಸಾವು ಪ್ರಕರಣ; ಲಾರಿ ಚಾಲಕನ ಬಂಧನ - Football player death case

ರಸ್ತೆ ಅಪಘಾತದಲ್ಲಿ ಫುಟ್‌ಬಾಲ್ ಆಟಗಾರನ ಸಾವಿಗೆ ಕಾರಣನಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Eಅಪಘಾತವೆಸಗಿ ಫುಟ್‌ಬಾಲ್‌ ಆಟಗಾರನ ಸಾವಿಗೆ ಕಾರಣವಾಗಿದ್ದ ಆರೋಪಿಯ ಬಂಧನ
ಅಪಘಾತವೆಸಗಿ ಫುಟ್‌ಬಾಲ್‌ ಆಟಗಾರನ ಸಾವಿಗೆ ಕಾರಣವಾಗಿದ್ದ ಆರೋಪಿಯ ಬಂಧನ

By ETV Bharat Karnataka Team

Published : Feb 13, 2024, 3:30 PM IST

ಬೆಂಗಳೂರು: ಅಪಘಾತವೆಸಗಿ ರಾಜ್ಯ ಮಟ್ಟದ ಫುಟ್‌ಬಾಲ್ ಆಟಗಾರನ ಸಾವಿಗೆ ಕಾರಣನಾಗಿ ಪರಾರಿಯಾಗಿದ್ದ ಲಾರಿ ಚಾಲಕನನ್ನು ನಗರದ ಕೆ.ಆರ್.ಪುರಂ ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಜಾಪುರದ ನಿವಾಸಿ ಮಂಜುನಾಥ ಬಂಧಿತ ಆರೋಪಿ.

ಘಟನೆಯ ವಿವರ: ಜನವರಿ 21ರ ಬೆಳಗ್ಗೆ 2 ಗಂಟೆಯ ಸುಮಾರಿಗೆ ರಾಮಮೂರ್ತಿ ನಗರ ಮೇಲ್ಸೇತುವೆಯ ಸಮೀಪ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ರಾಜ್ಯಮಟ್ಟದ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ (27) ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಲಾರಿ ನಿಲ್ಲಿಸಿದೇ ಚಾಲಕ ಪರಾರಿಯಾಗಿದ್ದ. ಮೊನೀಶ್‌ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು.

ಮೊನೀಶ್‌ ಯಾರು?: ಪರಿಕ್ರಮ ಎಫ್.ಸಿ, ಡೆಕ್ಕನ್ ಎಫ್.ಸಿ, ಯಂಗ್ ಚಾಲೆಂಜರ್ಸ್ ಎಫ್.ಸಿ ಸೇರಿದಂತೆ ವಿವಿಧ ಕ್ಲಬ್‌ಗಳ ಪರ‌ ಆಡುತ್ತಿದ್ದ ಮೊನೀಶ್, ಆಲ್ ಇಂಡಿಯಾ ಫುಟ್‌ಬಾಲ್‌ ‌ಫೆಡರೇಶನ್ (ಎಐಎಫ್ಎಫ್)- ಡಿನಿಂದ 2019ರಲ್ಲಿ ಕೋಚಿಂಗ್ ಲೈಸೆನ್ಸ್ ಪಡೆದಿದ್ದರು. ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಷನ್ (ಬಿಡಿಎಫ್ಎ)-ಎ ಡಿವಿಷನ್ ಲೀಗ್ ಚಾಂಪಿಯನ್​ಶಿಪ್​ನಲ್ಲಿ ಬೆಂಗಳೂರು ಈಗಲ್ಸ್ ಎಫ್.ಸಿ ಪರ ಆಡುತ್ತಿದ್ದರು.

ಮೊನೀಶ್ ತಂದೆ ಕೃಷ್ಣಮೂರ್ತಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಸಂಚಾರಿ ಠಾಣಾ ಪೊಲೀಸರು ಇದೀಗ ಆರೋಪಿ ಲಾರಿ ಚಾಲಕ ಮಂಜುನಾಥನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಯುವಕ ಸಾವು; ಈ ದುರಂತಕ್ಕೆ ತಾನೇ ಕಾರಣ ಎಂದು ಬೈಕ್​ ಸವಾರ ಆತ್ಮಹತ್ಯೆ

ABOUT THE AUTHOR

...view details