ಬೆಂಗಳೂರು:ಬೆಳಗ್ಗೆ 9 ಗಂಟೆಗೆ ಅಧಿವೇಶನದ ಕಲಾಪ ಆರಂಭಿಸುವುದಕ್ಕೆ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ವಿಧಾನಸಭೆ ಕಲಾಪವನ್ನು ಬೆಳಿಗ್ಗೆ 9ಕ್ಕೆ ಆರಂಭಿಸಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಿರ್ಧರಿಸಿದ್ದರು. ಇದಕ್ಕಾಗಿ ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಶಾಸಕರಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಸಕಾಲಕ್ಕೆ ಶಾಸಕರು ಕಲಾಪಕ್ಕೆ ಬರುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದರು. ಬೆಳಗ್ಗೆ ಬೇಗ ಕಲಾಪ ಆರಂಭಿಸಿದರೆ ಸದಸ್ಯರುಗಳಿಗೆ ಚರ್ಚೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂಬ ಉದ್ದೇಶದೊಂದಿಗೆ 9 ಗಂಟೆಗೆ ಕಲಾಪ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ಹೇಳಿದ್ದರು.