ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಭೀಕರ ಅಪಘಾತದಲ್ಲಿ ದಂಪತಿ ಸಾವು - Terrible Accident - TERRIBLE ACCIDENT

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಡ - ಹೆಂಡತಿ ಮೃತಪಟ್ಟ ಘಟನೆ ನಡೆದಿದೆ.

ಭೀಕರ ಅಪಘಾತದಲ್ಲಿ ದಂಪತಿ ಸಾವು
ಭೀಕರ ಅಪಘಾತದಲ್ಲಿ ದಂಪತಿ ಸಾವು

By ETV Bharat Karnataka Team

Published : Mar 28, 2024, 6:38 PM IST

ಚಿಕ್ಕಮಗಳೂರು:ಸ್ಕೂಟಿ ಮತ್ತು ಬೊಲೆರೋ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ನಡೆದಿದೆ. ಅರ್ಜುನ್ ಹಾಗೂ ಶ್ವೇತಾ ಮೃತ ದಂಪತಿ. ಮೃತರು ಸಿದ್ಧಾಪುರ ಗ್ರಾಮದವರು ಎಂದು ತಿಳಿದು ಬಂದಿದೆ.

ಸ್ಕೂಟಿಯಲ್ಲಿ ಊರಿನಿಂದ ಅಜ್ಜಂಪುರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ, ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಸ್ಕೂಟಿ ಸಂಪೂರ್ಣವಾಗಿ ಜಖಂ ಆಗಿದೆ. ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೊಲೆರೋ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಕೂಟಿ ಸವಾರ ಅರ್ಜುನ್ ಹೆಲ್ಮೆಟ್ ಧರಿಸದಿರುವುದು ಕೂಡ ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ. ಬೊಲೆರೋ ಚಾಲಕ ದಾವಣಗೆರೆ ಮೂಲದವರು ಎನ್ನಲಾಗುತ್ತಿದ್ದು, ಅವರನ್ನು ಬಂಧಿಸಿರುವ ಅಜ್ಜಂಪುರ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ದಂಪತಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆಸ್ಪತ್ರೆ ಬಳಿ ಜನರು ಜಮಾಯಿಸಿದ್ದಾರೆ. ಘಟನೆಯಿಂದ ಮುಖ್ಯ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾರ್ವಜನಿಕರು ಬೊಲೆರೋ ಚಾಲಕನಿಗೆ ಹಿಡಿಶಾಪ ಹಾಕುತ್ತಿದ್ದುದು ಸ್ಥಳದಲ್ಲಿ ಕಂಡು ಬಂತು. ಸದ್ಯ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:ನೀತಿ ಆಯೋಗದ ಮಾಜಿ ಉದ್ಯೋಗಿಗೆ ಅಪಘಾತ, ಗಂಡನೆದುರೇ ಪ್ರಾಣ ಬಿಟ್ಟ ಪಿಎಚ್​ಡಿ ವಿದ್ಯಾರ್ಥಿನಿ - tragic road accident

ABOUT THE AUTHOR

...view details