ಬೆಂಗಳೂರು:ಕೊನೆಗೂ ಸರ್ಕಾರ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಹೊರಡಿಸಿದೆ. 36 ಮಂದಿ ಶಾಸಕರುಗಳಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎನ್.ಎ.ಹ್ಯಾರೀಸ್ ಗೆ ಬಿಡಿಎ ಅಧ್ಯಕ್ಷ ಸ್ಥಾನ, ಬೇಲೂರು ಗೋಪಾಲಕೃಷ್ಣ ಅವರಿಗೆ ಅರಣ್ಯ ಕೈಗಾರಿಕಾ ನಿಗಮ, ಶಿವಲಿಂಗೇಗೌಡರಿಗೆ ಕರ್ನಾಟಕ ಗೃಹ ಮಂಡಳಿ, ನರೇಂದ್ರಸ್ವಾಮಿಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಹೆಚ್ ಸಿ ಬಾಲಕೃಷ್ಣಗೆ ಕರ್ನಾಟಕ ಸಾರಿಗೆ ನಿಗಮ, ವಿನಯ್ ಕುಲಕರ್ಣಿಗೆ ಬೆಂಗಳೂರು ಜಲಮಂಡಳಿ, ಶ್ರೀನಿವಾಸ್ ಮಾನೆ ಅವರಿಗೆ ಡಿಸಿಎಂ ರಾಜಕೀಯ ಸಲಹೆಗಾರ, ಅನಿಲ್ ಚಿಕ್ಕಮಾದುಗೆ ಜಂಗಲ್ ಲಾಡ್ಜ್, ವಿಜಯಾನಂದ ಕಾಶಪ್ಪನವರ್‌ಗೆ ಕ್ರೀಡಾ ಪ್ರಾಧಿಕಾರ, ರೂಪಕಲಾರಿಗೆ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.
ಗುಬ್ಬಿ ಶ್ರೀನಿವಾಸ್ಗೆ ಕರ್ನಾಟಕ ಸಾರಿಗೆ ರಸ್ತೆ ನಿಗಮ, ಅಪ್ಪಾಜಿ ನಾಡಗೌಡಗೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಹೆಚ್ ವೈ ಮೇಟಿಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ, ಪುಟ್ಟರಂಗ ಶೆಟ್ಟಿಗೆ ಎಂಎಸ್ಐಎಲ್, ಜೆ.ಟಿ.ಪಾಟೀಲ್ ಗೆ ಹಟ್ಟಿ ಚಿನ್ನದ ಗಣಿ, ಮಹಾಂತೇಶ ಕೌಜಲಗಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ರಾಜಾ ವೆಂಕಟಪ್ಪ ನಾಯಕ್ ಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಬಿ.ಕೆ.ಸಂಗಮೇಶ್ವರ್ಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿ ಅಧ್ಯಕ್ಷಗಿರಿ ಸಿಕ್ಕಿದೆ.