ಬೆಂಗಳೂರು :ನಮ್ಮ ಮೆಟ್ರೋ ಸಂಸ್ಧೆ ಪ್ರಯಾಣಿಕರಿಗಾಗಿ ರೈಲು ನಿಲ್ದಾಣಗಳಲ್ಲಿ ನೂತನ ಸೆಲ್ಫಿ ಪಾಯಿಂಟ್ಗಳನ್ನು ನಿರ್ಮಿಸಿದೆ. ಈ ಉಪಕ್ರಮದಿಂದ ಮೆಟ್ರೋ ನಿಲ್ದಾಣ, ರೈಲು ಸೇರಿದಂತೆ ವಿವಿಧ ಕಡೆಗಳಲ್ಲಿ ಸೆಲ್ಫಿ ತೆಗೆದುಕೊಳ್ಳುಲು ಅಧಿಕೃತ ಅನುಮತಿ ಸಿಕ್ಕಂತಾಗಿದೆ. ಸದ್ಯ ಹಸಿರು ಮಾರ್ಗದ ಬನಶಂಕರಿ ಹಾಗೂ ಕೋಣನಕುಂಟೆ ನಿಲ್ದಾಣಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸೆಲ್ಫಿ ಪಾಯಿಂಟ್ಗಳನ್ನು ನಿರ್ಮಿಸಲಾಗಿದೆ. ನಮ್ಮ ಮೆಟ್ರೋ ಸಾರಿಗೆ ವಿಶೇಷತೆ, ಬೆಂಗಳೂರಿನ ಸಾರಿಗೆ ಕುರಿತು ಪ್ರಚಾರ ನೀಡಲು ಬಳಕೆಯಾಗಲಿದೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವಿನೂತನ ಸೆಲ್ಫಿ ಪಾಯಿಂಟ್ ನಿರ್ಮಾಣ
ಬೆಂಗಳೂರಿನ ಬನಶಂಕರಿ ಹಾಗೂ ಕೋಣನಕುಂಟೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗಿದೆ.
Published : Feb 19, 2024, 10:56 PM IST
ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆ ಹಾಕಲಾಗಿದ್ದು, ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಸೆಲ್ಫಿ ಪಾಯಿಂಟ್ ಎಂದು ನೇಮ್ ಬೋರ್ಡ್ ಸಹ ಅಳವಡಿಸಲಾಗಿದೆ. ಇಲ್ಲಿ ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ. ಮುಖ್ಯವಾಗಿ ಕೋಣಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಲ್ಲಿ ಸೆಲ್ಫಿ ಪಾಯಿಂಟ್ಗಾಗಿ ಹೆಚ್ಚು ಸ್ಥಳ ಮೀಸಲಿಡಲಾಗಿದೆ. ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ಕೊಂಚ ಕಡಿಮೆ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. ಲೈಟಿಂಗ್ ನಿಂದ ಕಂಗೊಳಿಸುತ್ತಿರುವ ಈ ಸೆಲ್ಫಿ ಪಾಯಿಂಟ್ನಲ್ಲಿ ಪ್ರಯಾಣಿಕರು ಖುಷಿ ಖುಷಿಯಾಗಿ ಫೋಟೋ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ಚಿಕ್ಕಬಳ್ಳಾಪುರ ನಗರಕ್ಕೆ ನಮ್ಮ ಮೆಟ್ರೋ ತರುವುದಾಗಿ ಶಾಸಕ ಪ್ರದೀಪ್ ಈಶ್ವರ್ ಭರವಸೆ