ಕರ್ನಾಟಕ

karnataka

ETV Bharat / state

ಉಡುಪಿ: ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಬಾವಿಯಲ್ಲಿ ಪತ್ತೆ - Missing Boy Found Dead - MISSING BOY FOUND DEAD

ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಸಮೀಪದ ಬಾವಿಯಲ್ಲಿ ಇತ್ತೀಚಿಗೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ದೊರೆತಿದೆ.

ವಿದ್ಯಾರ್ಥಿಯ ಶವ ಬಾವಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Aug 20, 2024, 9:22 PM IST

Updated : Aug 20, 2024, 9:51 PM IST

ಉಡುಪಿ: ಮೊಬೈಲ್ ಕೊಡದಿದ್ದಕ್ಕೆ ಮನೆಬಿಟ್ಟು ಹೋಗಿ, ಬಳಿಕ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಹಿಂಬದಿಯ ಬಾವಿಯೊಂದರಲ್ಲಿ ಇಂದು ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಹಿರಿಯಡಕ ಅಂಜಾರು ಪೊಲೀಸ್ ಠಾಣೆಯ ಕ್ವಾಟ್ರಸ್ ಬಳಿಯ ನಿವಾಸಿ ಪ್ರಥಮೇಶ್ (17) ಎಂದು ಗುರುತಿಸಲಾಗಿದೆ.

ಈತ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ಮೊಬೈಲ್ ಕೊಡದಿದ್ದಕ್ಕೆ ಮನೆಬಿಟ್ಟು ಹೋಗಿದ್ದ. ಬಳಿಕ ಮನೆಯವರು ಹಾಗೂ ಸ್ನೇಹಿತರು ಎಷ್ಟೇ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.

ಇಂದು ಬೆಳಿಗ್ಗೆ ಕಾಲೇಜಿನ ಹಿಂಬದಿಯ ಬಾವಿಯೊಂದರಲ್ಲಿ ಮೃತದೇಹ ಕಂಡುಬಂದಿದೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಗಳೂರು: ಫುಟ್ಬಾಲ್ ಪಂದ್ಯಾಟ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ: ಅರೆಬೆತ್ತಲೆಗೊಳಿಸಿ ವಿದ್ಯಾರ್ಥಿ ಥಳಿಸಿದ ಇಬ್ಬರು ವಶಕ್ಕೆ - Riot between two colleges students

Last Updated : Aug 20, 2024, 9:51 PM IST

ABOUT THE AUTHOR

...view details