ಬೆಂಗಳೂರು:ರಾಜ್ಯ ಬಿಜೆಪಿ ಬಣ ಬಡಿದಾಟ ರಾಯಕೀಯ ಇದೀಗ ದೆಹಲಿ ಅಂಗಳಕ್ಕೆ ತಲುಪಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮತ್ತೊಮ್ಮೆ ಬಿಸಿ ಮುಟ್ಟಿಸಲು, ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಮಧ್ಯಪ್ರವೇಶ ಮಾಡಿದೆ. ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ನೋಟಿಸ್ ಜಾರಿ ಮಾಡಿದೆ.
ಪಕ್ಷದ ಶಿಸ್ತು ಪಾಲನೆ ಮಾಡದಿರುವ ಬಗ್ಗೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವ ಯತ್ನಾಳ್, 72 ಗಂಟೆಯೊಳಗೆ ಉತ್ತರಿಸುವಂತೆ ಸಮಿತಿ ಸೂಚನೆ ನೀಡಿದೆ.
ಶೋಕಾಸ್ ನೋಟಿಸ್ (ETV Bharat) ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಯತ್ನಾಳ್ ಹಾಗೂ ಅವರ ಬಣದ ಕೆಲ ನಾಯಕರು ಪಟ್ಟು ಹಿಡಿದಿದ್ದು, ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ.
ಇಂದೂ ಸಹ ಯತ್ನಾಳ್ ಬಣದ ನಾಯಕರು ದೆಹಲಿಯಲ್ಲಿ ಸಭೆ ನಡೆಸಿದ್ದು, ಕೇಂದ್ರ ಸಚಿವ ಸೋಮಣ್ಣ ಅವರ ಮನೆಯ ಪೂಜೆಗೆ ತೆರಳಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಯತ್ನಾಳ್ ಅವರಿಗೆ ಮತ್ತೊಂದು ಶೋಕಾಸ್ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ:ಕಚೇರಿ ಉದ್ಘಾಟನೆಗೆ ಬೀಗರನ್ನೇ ಕರೆದಿಲ್ಲ, ಅಂತಹದ್ದರಲ್ಲಿ ಯತ್ನಾಳ್ ಟೀಂ ಮತ್ತೊಂದು ಟೀಂ ಬರುತ್ತಾ?: ಕೇಂದ್ರ ಸಚಿವ ವಿ ಸೋಮಣ್ಣ - V SOMANNA REACTION