ಕರ್ನಾಟಕ

karnataka

ETV Bharat / state

ತುರ್ತು ಪರಿಸ್ಥಿತಿಯಿಂದ ದುರ್ಬಲ ವರ್ಗದವರಿಗೆ ತೊಂದರೆಯಾಗಿಲ್ಲ: ರಮಾನಾಥ ರೈ - Ramanath Rai

ಪ್ರಜಾಪ್ರಭುತ್ವ ಉಳಿಸುವ ಮಾತು ಬಂದಾಗ ಬಿಜೆಪಿಯವರಿಗೆ ತುರ್ತುಪರಿಸ್ಥಿತಿಯ ನೆನಪಾಗುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.

ಮಾಜಿ ಸಚಿವ ರಮಾನಾಥ ರೈ
ಮಾಜಿ ಸಚಿವ ಬಿ.ರಮಾನಾಥ ರೈ (ETV Bharat)

By ETV Bharat Karnataka Team

Published : Jul 19, 2024, 8:34 AM IST

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ (ETV Bharat)

ಮಂಗಳೂರು: "ತುರ್ತುಪರಿಸ್ಥಿತಿ ಹೇರಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ದುರ್ಬಲ ವರ್ಗದವರಿಗೆ ತೊಂದರೆಯಾಗಿಲ್ಲ. ಇಲ್ಲಿ ಪ್ರಗತಿಪರ ಕಾರ್ಯಕ್ರಮಗಳು ಯಥಾವತ್ತಾಗಿ ಜಾರಿಯಾಗಿದ್ದವು" ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

"ತುರ್ತುಪರಿಸ್ಥಿತಿ ಕಾಲದಲ್ಲಿ ಜಿಲ್ಲೆಯಲ್ಲಿ ಇಂದಿರಾ ಗಾಂಧಿಯವರ ಭೂ ಮಸೂದೆ, ಬ್ಯಾಂಕ್ ರಾಷ್ಟ್ರೀಕರಣ, ಬಸ್ ರಾಷ್ಟ್ರೀಕರಣ, ಋಣ ಪರಿಹಾರ ಕಾನೂನು, ಉಳ್ಳವರ ಕುಮ್ಕಿ ಭೂಮಿ ಹಕ್ಕನ್ನು ವಜಾಗೊಳಿಸಿ ಬಡವರಿಗೆ 5 ಸೆಂಟ್ಸ್‌ನಂತೆ ಹಂಚಿಕೆ ಮೊದಲಾದವುಗಳು ಪರಿಣಾಮಕಾರಿಯಾಗಿ ಜಾರಿಯಾದವು" ಎಂದರು.

"ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರನ್ನು ತಾಯಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಹಿರಿಯರು ನಮ್ಮ ಜಿಲ್ಲೆಯಲ್ಲಿದ್ದರು. ಆದರೆ ಇಂದು ಅದನ್ನು ಮರೆಮಾಚಿ ಅವರ ಹೆಸರಿಗೆ ಕಳಂಕ ತರುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಕಾಂಗ್ರೆಸ್​​ ಪಕ್ಷದ ಮಹತ್ವದ ಪಾತ್ರವಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವ ಕಾರ್ಯವನ್ನು ಯಾರು ಮಾಡುತ್ತಾರೋ ಅದರ ವಿರುದ್ಧ ಪ್ರತಿಯೊಬ್ಬ ಕಾರ್ಯಕರ್ತನೂ ಮಾತನಾಡಬೇಕಾದ ಅನಿವಾರ್ಯತೆಯಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲಾಗಿರಬಹುದು. ಆದರೆ ಮುಂದೆ ಬರುವ ಜಿ.ಪಂ., ತಾ.ಪಂ. ಹಾಗೂ ಮ.ನ.ಪಾ.ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಾಢ್ಯವಾಗಿ ಕಟ್ಟಿ ಗೆಲ್ಲಿಸುವಂತಹ ಕೆಲಸ ಮಾಡಬೇಕು" ಎಂದು ಕರೆ ಕೊಟ್ಟರು.

ಕುಮ್ಕಿ ಭೂಮಿಯನ್ನು ಸರಕಾರ ಲೀಸ್‌ ಆಧಾರದಲ್ಲಿ ಗುತ್ತಿಗೆ ನೀಡುವ ವಿಚಾರದ ಕುರಿತು ಮಾತನಾಡಿದ ರೈ, "ರಬ್ಬರ್, ಕಾಫಿ, ಏಲಕ್ಕಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಕಾರಣಕ್ಕಾಗಿ ಕುಮ್ಕಿ ಜಾಗವನ್ನು ಗುತ್ತಿಗೆ ಕೊಡುವ ಕಾರ್ಯವನ್ನು ಸರಕಾರ ಮಾಡಹೊರಟಿದೆ. ಬಿಜೆಪಿಯವರಿಗೆ ಮಾಹಿತಿ ಕೊರತೆಯಿದೆ. 94ಇ ಯಲ್ಲಿ ಕೃಷಿಕರಿಗೆ ಗುತ್ತಿಗೆ ಕೊಡುವಂತಹ ಅವಕಾಶ ಕೊಡಲಾಗುತ್ತದೆ" ಎಂದರು.

ಇದನ್ನೂ ಓದಿ:ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಣೆ: ಜಿಟಿ ಮಾಲ್ ಸ್ವಯಂಪ್ರೇರಿತ ಬಂದ್ - GT Mall Close

ABOUT THE AUTHOR

...view details