ಕರ್ನಾಟಕ

karnataka

ETV Bharat / state

ನೆಲಮಂಗಲ ಟೌನ್ ಪೊಲೀಸರಿಂದ ಭರ್ಜರಿ ಬೇಟೆ: ಮನೆಗಳ್ಳತನ, ಸರಗಳ್ಳತನದಲ್ಲಿ ಭಾಗಿಯಾದ್ದ ಖದೀಮರ ಬಂಧನ - thieves Arrested - THIEVES ARRESTED

ಪ್ರತ್ಯೇಕ ಪ್ರಕರಣಗಳಲ್ಲಿ ಮನೆಗಳ್ಳತನ, ಸರಗಳ್ಳತ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕ ಸೇರಿ ಐವರನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.

ಮನೆಗಳ್ಳತನ, ಸರಗಳ್ಳತನದಲ್ಲಿ ಭಾಗಿಯಾದ್ದ ಖದೀಮರ ಬಂಧನ
ಮನೆಗಳ್ಳತನ, ಸರಗಳ್ಳತನದಲ್ಲಿ ಭಾಗಿಯಾದ್ದ ಖದೀಮರ ಬಂಧನ (ETV Bharat)

By ETV Bharat Karnataka Team

Published : May 28, 2024, 9:24 PM IST

ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಪ್ರತ್ಯೇಕ ಪ್ರಕರಣಗಳಲ್ಲಿ ಮನೆಗಳ್ಳತನ, ಸರಗಳ್ಳತ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕ ಸೇರಿ ಐವರನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ. ಅಶೋಕ, ವಿನೋದ, ಶಿವಕುಮಾರ್ ಹಾಗೂ ಸಂತೋಷ್ ಬಂಧಿತರು. ಪೊಲೀಸರು ಬಂಧಿತರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ, ಟಿವಿ ಹಾಗೂ ಲ್ಯಾಪ್‌ಟಾಪ್ ಜೊತೆಗೆ ಎರಡು ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಲಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಾರಸುದಾರರಿಗೆ ಹಿಂತಿರುಗಿಸಿದರು.

ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳ್ಳತನ ಪ್ರಕರಣ ಸಂಬಂಧ ಆರೋಪಿಗಳಾದ ಅಶೋಕ ಮತ್ತು ವಿನೋದ್​ ಎಂಬ ಅಣ್ಣ ತಮ್ಮಂದಿರನ್ನು ಬಂಧಿಸಲಾಗಿದೆ. ಇವರಿಂದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನಕ್ಕೆ ಸಂಬಂಧಿಸಿದ ಸರ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಬೈಕ್​ ಅನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಈ ಹಿಂದೆ ಕೂಡ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಜೈಲಿಗೆ ಹೋಗಿ ಬಂದಿದ್ದರೂ ಸರಗಳ್ಳತನ, ಮನೆಗಳ್ಳತನ ಮುಂದುವರೆಸಿದ್ದರು ಎಂದರು.

ವಿಲಾಸಿ ಜೀವನಕ್ಕಾಗಿ ಹಾಗೂ ಮಾಡಿದ ಸಾಲ ತೀರಿಸಲು ಮನೆಗಳ್ಳತನ ಹಾಗೂ ನೆಲಮಂಗಲ ಟೌನ್, ರಾಜಾನುಕುಂಟೆ, ಬೆಂಗಳೂರು ನಗರ, ಕನಕಪುರ, ತಾವರೆಕೆರೆ ಮುಂತಾದ ಕಡೆ ಸರಗಳ್ಳತನ ಮಾಡಿ, ಅವುಗಳನ್ನು ಅಟಿಕಾ ಗೋಲ್ಡ್​ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿ ಶಿವಕುಮಾರ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಗಿದೆ. ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯ ಬಸವನಹಳ್ಳಿ ಬಳಿ ಮಹಿಳೆಯ ಸರ ಕದಿಯಲು ಪ್ರಯತ್ನಿಸುತ್ತಿದ್ದಾಗ ಆರೋಪಿ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಒಟ್ಟಾರೆ ಶೋಕಿ ಜೀವನ ಹಾಗೂ ವಿವಿಧ ಆಸೆಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನದ ಹಾದಿ ಹಿಡಿದು ಜೈಲಿಗೆ ಹೋಗಿ ಬಂದರೂ ಕೂಡ ಬದಲಾಗದೇ ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದವರನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಂಧಿಸಿದ ನೆಲಮಂಗಲ ಟೌನ್ ಪೊಲೀಸರಾದ ಇನ್ಸ್‌ಪೆಕ್ಟರ್ ರಾಕೇಶ್, ಪಿಎಸ್​ಐಗಳಾದ ಜಯಂತಿ, ನಂಜಯ್ಯ, ಧನರಾಜ್ ಹಾಗೂ ಸಿಬ್ಬಂದಿಗಳನ್ನು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದರು.

ಇದನ್ನೂ ಓದಿ:ಕೊಪ್ಪಳ: ಅಜ್ಜಿ-ಮಗಳು-ಮೊಮ್ಮಗ ಮನೆಯಲ್ಲಿ ಶವವಾಗಿ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ - THREE PEOPLE DIED

ABOUT THE AUTHOR

...view details