ಬೆಂಗಳೂರು: ಯುಕೆಯ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣ ಗ್ಯಾಟ್ವಿಕ್ ನಗರಕ್ಕೆ ಬೆಂಗಳೂರಿನಿಂದ ನೇರ ವಿಮಾನ ಸೇವೆಯನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಆರಂಭಿಸುತ್ತಿದೆ. ಆಗಸ್ಟ್ 18 ರಿಂದ ವಿಮಾನಯಾನ ಆರಂಭವಾಗಲಿದ್ದು, ಈಗಾಗಲೇ ಬೆಂಗಳೂರು – ಗ್ಯಾಟ್ವಿಕ್ ಮಾರ್ಗದ ಬುಕ್ಕಿಂಗ್ ಆರಂಭವಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಬೆಂಗಳೂರು, ಲಂಡನ್‌ನ ಹೀಥ್ರೂ ಮತ್ತು ಗ್ಯಾಟ್ವಿಕ್ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಭಾರತದ ನಗರವಾಗಿದೆ. ಏರ್ ಇಂಡಿಯಾವು ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ವಾರಕ್ಕೆ 5 ಬಾರಿ ವಿಮಾನಯಾನ ಸೇವೆ ನೀಡಲಿದೆ. ವಾರದಲ್ಲಿ ಮಂಗಳವಾರ ಮತ್ತು ಶನಿವಾರ ಸೇವೆ ಇರುವುದಿಲ್ಲ. AI 177 ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಟು, ರಾತ್ರಿ 7.05 ಕ್ಕೆ ಗ್ಯಾಟ್ವಿಕ್ ತಲುಪಲಿದೆ. AI 178 ವಿಮಾನವು ಗ್ಯಾಟ್ವಿಕ್ ನಗರದಿಂದ ರಾತ್ರಿ 8.35ಕ್ಕೆ ಟೇಕ್ ಆಫ್ ಆಗಿ, ಬೆಳಗ್ಗೆ 10.50ಕ್ಕೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಏರ್ ಇಂಡಿಯಾ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.