ಶಿವಮೊಗ್ಗ: 'ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು, ರಫ್ ಆಗಿರಬಾರದು' ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ. ಇಂದು ತಮ್ಮ ಪತ್ನಿ ಗೀತಾ ಜೊತೆ ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, "ನಾನು ನಾಮಪತ್ರ ಸಲ್ಲಿಸಲು ಎರಡನೇ ಬಾರಿ ಬಂದಿದ್ದೇನೆ. ವಾತಾರಣ ಚೆನ್ನಾಗಿದೆ. ಗೀತಾ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಜನರಿಗೆ ಬದಲಾವಣೆ ಬೇಕು ಅನಿಸಿದೆ. ನಾವು ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇವೆ ಎಂದರು.
"ಎಲ್ಲಿ ಹೋದರು ನಮಗೆ ಪಾಸಿಟಿವ್ ಸಪೋರ್ಟ್ ಬರುತ್ತಿದೆ. ಅವರ ಸಂತೋಷಕ್ಕೆ ನಾನು ಹಾಡು ಹಾಡುತ್ತೇನೆ. ಅಲ್ಲಿ ಯಾವ ವಯಸ್ಸಿನವರಿಗೆ ಹೇಗೆ ಮಾತನಾಡಬೇಕೋ ಹಾಗೆ ಮಾತನಾಡುತ್ತೇನೆ. ನಾನು ನನ್ನ ಪತ್ನಿಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಗೀತಾ ಯಾವಾಗಾಲೂ ಸಾಫ್ಟ್, ರಾಜಕೀಯಕ್ಕೆ ರಫ್ ಆಗಿ ಇರಬಾರದು. ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು. ಮಾತನಾಡುವ ಬದಲು ಕೆಲಸ ಮಾಡಬೇಕು. ಆ ಮೂಲಕ ನಮ್ಮ ಜವಾಬ್ದಾರಿ ತೋರಿಸಿಕೊಡಬೇಕು".
"ಮಾತನಾಡಿದರೆ ಸಾಲದು, ಮಾಡುವ ಕೆಲಸ ಜೋರಾಗಿ ಇರಬೇಕು. ಕೆಲಸ ಮಾಡುವ ಮನೋಭಾವ ಇರಬೇಕು. ನಾನು ಶೂಟಿಂಗ್ ರದ್ದುಗೊಳಿಸಿ ಪ್ರಚಾರ ಮಾಡುತ್ತಿದ್ದೇನೆ. ನನಗೆ ರಾಜಕೀಯ ಗೊತ್ತಿಲ್ಲ. ನಾಯಕರು ಹೇಳಿದಂತೆ, ಅವರು ಕರೆದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಎಲ್ಲಾ ಕಾಂಗ್ರೆಸ್ ನಾಯಕರ ಸಾಥ್ ಚೆನ್ನಾಗಿದೆ. ಪ್ರಚಾರದ ಕಾರ್ಯದ ಅನುಭವ ಚೆನ್ನಾಗಿ ಆಗುತ್ತಿದೆ. ಒಳ್ಳೆಯ ಬದಲಾವಣೆ ಬರಬೇಕಿದೆ. ಬಿಸಿನಲ್ಲಿ ನನಗೆ ಸೆಕೆ ಅನ್ನಿಸುತ್ತಿಲ್ಲ. ಜನರ ನಡುವೆ ಸೆಕೆ ಅನ್ನಿಸುತ್ತಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡದೆ, ನಾನು ಪ್ರಚಾರಕ್ಕೆ ಬಂದಿದ್ದೇನೆ ಅಷ್ಟೆ" ಎಂದರು.