ಕರ್ನಾಟಕ

karnataka

ETV Bharat / state

ಮಂಡ್ಯ: ಮಹಿಳೆ ಮತ್ತು ಎರಡೂವರೆ ವರ್ಷದ ಮಗುವನ್ನು ತುಂಡರಿಸಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ದುಷ್ಕರ್ಮಿಗಳು - mandya murder case - MANDYA MURDER CASE

ಮಹಿಳೆಯೊಂದಿಗೆ ಎರಡೂವರೆ ವರ್ಷದ ಮಗುವನ್ನು ಕೊಂದು ದುಷ್ಕರ್ಮಿಗಳು ಚೀಲದಲ್ಲಿ ಮೃತ ದೇಹಗಳನ್ನು ತುಂಬಿ ಕರೆಗೆ ಎಸೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಹಿಳೆ ಸಮೇತ ಎರಡೂವರೆ ವರ್ಷದ ಮಗುವನ್ನು ತುಂಡರಿಸಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ದುಷ್ಕರ್ಮಿಗಳು
ಮಹಿಳೆ ಸಮೇತ ಎರಡೂವರೆ ವರ್ಷದ ಮಗುವನ್ನು ತುಂಡರಿಸಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ದುಷ್ಕರ್ಮಿಗಳು

By ETV Bharat Karnataka Team

Published : Mar 21, 2024, 1:54 PM IST

ಮಂಡ್ಯ: ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಮಹಿಳೆ ಮತ್ತು ಎರಡೂವರೆ ವರ್ಷದ ಮಗುವೊಂದನ್ನು ದುಷ್ಕರ್ಮಿಗಳು ತುಂಡರಿಸಿ ಚೀಲದಲ್ಲಿ ಕಟ್ಟಿ ಕೆರೆಗೆ ಬಿಸಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ಜಯಮ್ಮ (46), ಅವರ ಎರಡೂವರೆ ವರ್ಷದ ಮೊಮ್ಮಗಳು ರಿಷಿಕಾ ಕೊಲೆಯಾದವರು. ಜಯಮ್ಮ ಮಾ.12ರಂದು ಆದಿಚುಂಚನಗಿರಿಯ ವ್ಯಕ್ತಿಯೊಬ್ಬರು ತನಗೆ ಹಣ ನೀಡಬೇಕಾಗಿದ್ದು, ಅವರಿಂದ ಹಣ ಪಡೆದು ಬರುವುದಾಗಿ ತಿಳಿಸಿ ಮನೆಯಿಂದ ಮೊಮ್ಮಗಳ ಜತೆ ಬಂದಿದ್ದರು. ನಂತರ ಮಾ.18ರ ವರೆಗೂ ಮನೆಗೆ ಹಿಂದಿರುಗಿರಲಿಲ್ಲ. ಜಯಮ್ಮ ಅವರ ಮೊಬೈಲ್ ಫೋನ್ ಸ್ವೀಚ್‌ ಆಫ್‌ ಆಗಿತ್ತು. ಹೀಗಾಗಿ, ಜಯಮ್ಮ ಅವರ ಪುತ್ರ ಪ್ರವೀಣ್ ಅವರು ತಾಯಿ ಮತ್ತು ತನ್ನ ಪುತ್ರಿ ಕಾಣೆಯಾಗಿರುವುದಾಗಿ ಅಜ್ಜಂಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮಾ.18ರಂದು ಮಧ್ಯಾಹ್ನ ಪ್ರವೀಣ್‌ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಜಯಮ್ಮ ಮತ್ತು ರಿಷಿಕಾಳನ್ನು ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಆದಿಚುಂಚನಗಿರಿ ಕಲ್ಯಾಣಿ ಬಳಿ ಇರುವ ಕೆರೆಗೆ ಬಿಸಾಕಿರುವುದಾಗಿ ತಿಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಪ್ರವೀಣ್‌ ಪೊಲೀಸರ ನೆರವಿನೊಂದಿಗೆ ಕೆರೆಗೆ ಬಂದು ಹುಡುಕಿದಾಗ ಚೀಲದಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಮುಖದ ಗುರುತು ಸಿಗದಂತೆ ಜಯಮ್ಮ ಮತ್ತು ರಿಷಿಕಾಳನ್ನು ಕೊಲೆ ಮಾಡಲಾಗಿದೆ.

ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಎಎಸ್ಪಿ ತಿಮ್ಮಯ್ಯ, ಸಿಪಿಐ ಬಿ.ಆರ್. ಗೌಡ ಪರಿಶೀಲನೆ ನಡೆಸಿದರು. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ವಿಜಯಪುರ: ಅಕ್ರಮ‌ ಸಂಬಂಧದ ಸಂಶಯದಿಂದ ಜೋಡಿ ಕೊಲೆ

ABOUT THE AUTHOR

...view details