ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಮಾವನ ಮನೆ ಬಾಡೂಟಕ್ಕೆ ತೆರಳಲು ಪೊಲೀಸ್​ ಜೀಪ್​ನ್ನೇ ಕರೆಸಿಕೊಂಡ ಅಳಿಯ​! ಮುಂದಾಗಿದ್ದೇನು? - Funny son in law - FUNNY SON IN LAW

ಕಾಫಿನಾಡಿನ ಭೂಪನೊಬ್ಬ ತನ್ನ ಮಾವನ ಮನೆಗೆ ಬಾಡೂಟಕ್ಕೆ ತೆರಳಲು ವಾಹನ ಸಿಗದಿದ್ದಾಗ ಪೊಲೀಸರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಆಮೇಲೇನಾಯ್ತು ಅನ್ನೋದರ ಮಾಹಿತಿ ಇಲ್ಲಿದೆ.

ಪೊಲೀಸ್​ ಜೀಪ್
ಪೊಲೀಸ್​ ಜೀಪ್ (ETV Bharat)

By ETV Bharat Karnataka Team

Published : Sep 28, 2024, 12:11 PM IST

ಚಿಕ್ಕಮಗಳೂರು:ಸಮಯ ಮೀರುತ್ತಿದೆ, ಮಳೆ ಬರುತ್ತಿದೆ. ಯಾವು ವಾಹನಗಳು ಬೇರೆ ಸಿಗ್ತಿಲ್ಲ. ಮಟನ್​​​ ಇರುತ್ತೋ. ಖಾಲಿ ಆಗುತ್ತೋ ಅಂತ ಮಾವನ ಮನೆಗೆ ಪಿತೃಪಕ್ಷದ ಬಾಡೂಟಕ್ಕೆ ಪೊಲೀಸ್​​​ ಜೀಪ್​​ ಕರೆಸಿ ಅಳಿಯನೊಬ್ಬ ನಗೆಪಾಟಲಿಗೀಡಾದ ವಿಚಿತ್ರ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಅಶೋಕ್​ ಎಂಬ ವ್ಯಕ್ತಿ ಪಲ್ಗುಣಿ ಗ್ರಾಮದ ತನ್ನ ಮಾವನ ಮನೆಗೆ ಮಹಾಲಯ ಅಮಾವಾಸ್ಯೆಯ ಬಾಡೂಟಕ್ಕೆ ಹೋಗಬೇಕಿತ್ತು. ಕೊಟ್ಟಿಗೆಹಾರ ಸುತ್ತಮುತ್ತ ಮಳೆ ಕೂಡ ಸುರಿಯುತ್ತಿತ್ತು. ಪಲ್ಗುಣಿ ಗ್ರಾಮಕ್ಕೆ ಹೋಗಲು ಯಾವ ವಾಹನಗಳು ಸಿಗಲಿಲ್ಲ. ಅದಕ್ಕಾಗಿ ಆತ 112 ಪೊಲೀಸ್​ ಠಾಣೆಗೆ ಫೋನ್ ಮಾಡಿ ಸರ್, 'ಮನೆಯಲ್ಲಿ ತುಂಬಾ ಗಲಾಟೆ ಆಗುತ್ತಿದೆ ಬನ್ನಿ' ಎಂದು ಕೊಟ್ಟಿಗೆಹಾರಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಎಲ್ಲಿ ಗಲಾಟೆ ನಡಿ ಮನೆಗೆ ಹೋಗೋಣ ಎಂದಾಗ, ಸರ್.. 'ಯಾವ ಗಲಾಟೆಯೂ ಇಲ್ಲ. ನಾನು ಪಲ್ಗುಣಿ ಗ್ರಾಮಕ್ಕೆ ನನ್ನ ಮಾವನ ಮನೆಗೆ ಪಿತೃಪಕ್ಷದ ಊಟಕ್ಕೆ ಹೋಗಬೇಕಿತ್ತು. ಅದಕ್ಕಾಗಿ ನಿಮಗೆ ಕರೆ ಮಾಡಿದೆ. ನನ್ನನ್ನು ಸ್ವಲ್ಪ ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡಿ ಸರ್' ಎಂದು ಕೇಳಿದ್ದಾನೆ.

ಪೊಲೀಸರಿಗೆ ಆತನ ಮಾತು ಕೇಳಿ ಬಯ್ಯಬೇಕೋ ಅಥವಾ ನಗಬೇಕೋ ಗೊತ್ತಾಗಲಿಲ್ಲ. ಆಮೇಲೆ ಪೊಲೀಸರೆ ಆತನಿಗೆ 'ಪೊಲೀಸ್ ಜೀಪ್ ಇರುವುದು ಸಮಾಜದ ಕೆಲಸ, ಸರ್ಕಾರದ ಕೆಲಸ ಮಾಡೋದಕ್ಕೆ ಕಣಪ್ಪಾ. ನಿಂಗೆ ಮಾವನ ಮನೆಗೆ ಕರ್ಕಂಡ್​ ಹೋಗಕ್ಕಲ್ಲ. ಇನ್ನೊಮ್ಮೆ ಹೀಗೆ ಮಾಡಬೇಡ' ಎಂದು ಬುದ್ಧಿ ಹೇಳಿ ಪೊಲೀಸರೇ ಹೋಗುತ್ತಿದ್ದ ಲಾರಿಯನ್ನು ಕೈ ಹಿಡಿದು ನಿಲ್ಲಿಸಿ ಆತನನ್ನು ಪಲ್ಗುಣಿ ಗ್ರಾಮದ ಮಾವನ ಮನೆಗೆ ಕಳಿಸಿದ್ದಾರೆ.

ಇದನ್ನೂ ಓದಿ:ಬಸ್ಸಿನಲ್ಲಿ ಹಣ, ಒಡವೆ ಬ್ಯಾಗ್ ಬಿಟ್ಟಿದ್ದ ಪ್ರಯಾಣಿಕರು: ಮರಳಿಸಿ ಪ್ರಾಮಾಣಿಕತೆ ಮೆರೆದ NWKRTC ಸಿಬ್ಬಂದಿ - NWKRTC Honesty

ABOUT THE AUTHOR

...view details