ಚಿಕ್ಕಮಗಳೂರು:ಏರ್ಗನ್ ಜತೆ ಆಟವಾಡುವಾಗ ಮಿಸ್ ಫೈರ್ ಆಗಿ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಿನ್ನೆ (ಗುರುವಾರ) ನಡೆದಿದೆ. ಮೃತ ಬಾಲಕನನ್ನು ವಿಷ್ಣು (7) ಎಂದು ಗುರುತಿಸಲಾಗಿದೆ. ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಕಾಲೊನಿಯಲ್ಲಿ ಘಟನೆ ಸಂಭವಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏರ್ಗನ್ನೊಂದಿಗೆ ಆಟವಾಡುವಾಗ ಮಿಸ್‌ಫೈರ್, ಚಿಕ್ಕಮಗಳೂರಿನಲ್ಲಿ 7 ವರ್ಷದ ಬಾಲಕ ಸಾವು - Air Gun Misfire - AIR GUN MISFIRE
ಏರ್ಗನ್ ಹಿಡಿದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು: ಏರ್ಗನ್ ಜೊತೆ ಆಟವಾಡುವಾಗ ಮಿಸ್ ಫೈರ್ ಆಗಿ 7 ವರ್ಷದ ಬಾಲಕ ಸಾವು
Published : Apr 12, 2024, 7:31 PM IST
ಶ್ರೀನಿವಾಸ್ ಎಂಬವರ ಮಗ ವಿಷ್ಣು ಏರ್ಗನ್ ಉಲ್ಟಾ ಹಿಡಿದುಕೊಂಡು ಆಟವಾಡುತ್ತಿದ್ದ. ಈ ವೇಳೆ ಅಚಾನಕ್ ಆಗಿ ಟ್ರಿಗರ್ ಒತ್ತಿದ್ದಾನೆ. ಏರ್ಗನ್ ಫೈರ್ ಆಗಿ ನೇರವಾಗಿ ಗನ್ನೊಳಗಿದ್ದ ಬಾಲ್ಸ್ ವಿಷ್ಣುವಿನ ಎದೆ ಭಾಗ ಹೊಕ್ಕಿದೆ. ಪೋಷಕರು ಮನೆಯಲ್ಲಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ವಿಜಯಪುರ ಜನತೆಗೆ ತಂಪೆರೆದ ಮಳೆರಾಯ: ಸಿಡಿಲಿಗೆ ಬಾಲಕ, ರೈತ ಬಲಿ - Vijayapura Rain