ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಆದರೂ, ಒಂದೇ ದಿನದಲ್ಲಿ 424 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ರಾಜ್ಯದಲ್ಲಿ ಇದುವರೆಗೂ ಒಟ್ಟು 9,082 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಪ್ರಮಾಣ ಶೇ.0.07 ರಷ್ಟು ಕಂಡುಬಂದಿದೆ.
ಡೆಂಗ್ಯೂ ಪ್ರಕರಣಗಳ ಸಂಬಂಧ ರೋಗಿಗಳು ಆಸ್ಪತ್ರೆಗೆ ಸೇರುವ ಸಂಖ್ಯೆಯೂ ಅಧಿಕವಾಗುತ್ತಿದ್ದು, ಒಂದೇ ದಿನದಲ್ಲಿ 2,557 ಮಂದಿ ಪರೀಕ್ಷೆಗೊಳಪಟ್ಟಿದ್ದಾರೆ. ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ 2,830, ಬೆಂಗಳೂರು ನಗರ 57, ಬೆಂಗಳೂರು ಗ್ರಾಮಾಂತರ 38, ರಾಮನಗರ 91, ಕೋಲಾರ 107, ಚಿಕ್ಕಬಳ್ಳಾಪುರ 108, ತುಮಕೂರು 224, ಚಿತ್ರದುರ್ಗ 340, ದಾವಣಗೆರೆ 231, ಶಿವಮೊಗ್ಗ 331, ಮೈಸೂರು 557 ಸೇರಿದಂತೆ ಈವರೆಗೆ ಒಟ್ಟು 9,082 ಪ್ರಕರಣಗಳು ದಾಖಲಾಗಿವೆ.