ಕರ್ನಾಟಕ

karnataka

ETV Bharat / state

ಶಿಗ್ಗಾಂವಿ ಉಪಚುನಾವಣೆ: 26 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆ

ಶಿಗ್ಗಾಂವಿ​​ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿದ್ದು, ಒಟ್ಟು 26 ಅಭ್ಯರ್ಥಿಗಳಿಂದ 46 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶಿಗ್ಗಾಂವ್ ಉಪಚುನಾವಣೆ: 26 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆ
ಶಿಗ್ಗಾಂವ್ ಉಪಚುನಾವಣೆ: 26 ಅಭ್ಯರ್ಥಿಗಳಿಂದ 46 ನಾಮಪತ್ರ ಸಲ್ಲಿಕೆ (ETV Bharat)

By ETV Bharat Karnataka Team

Published : 5 hours ago

ಹಾವೇರಿ:ಶಿಗ್ಗಾಂವಿ​​ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ 20 ಅಭ್ಯರ್ಥಿಗಳಿಂದ 25 ನಾಮಪತ್ರಗಳು ಸಲ್ಲಿಕೆಯಾದವು.

ಕಾಂಗ್ರೆಸ್​ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್​ 4 ನಾಮಪತ್ರಗಳನ್ನು ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿ ಎರಡು ನಾಮಪತ್ರಗಳನ್ನು ಸಲ್ಲಿಸಿದರು. ಪಕ್ಷೇತರ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿರುವ ಅಜ್ಜಂಪೀರ್ ಖಾದ್ರಿ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ರವಿ ಕೃಷ್ಣಾರೆಡ್ಡಿ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‍ನಿಂದ ಮಕ್ತುಮಸಾಬ ಮುಲ್ಲಾ, ಉತ್ತಮ ಪ್ರಜಾಕೀಯ ಪಕ್ಷದಿಂದ ಸಚಿನ್​​​ಕುಮಾರ ಕರ್ಜೇಕಣ್ಣನವರ, ಟಿಪ್ಪು ಸುಲ್ತಾನ ಪಾರ್ಟಿಯಿಂದ ಶೌಖತಅಲಿ ಬಂಕಾಪೂರ, ಪಕ್ಷೇತರರಾಗಿ ರಾಜು ನಾಯಕವಾಡಿ, ಶಂಕ್ರಪ್ಪ ಹುಲಸೋಗಿ, ಜಿತೇಂದ್ರ ಕನವಳ್ಳಿ, ಶಾಮಾಚಾರಿ ಕಮ್ಮಾರ, ಉಮೇಶ ದೈವಜ್ಞ, ಸಿದ್ದಪ್ಪ ಹೊಸಳ್ಳಿ, ಜಿ.ಅಚಿಜನಕುಮಾರ, ಗುರುಸಿದ್ದಗೌಡ ದ್ಯಾವನಗೌಡ್ರ, ಮಂಜುನಾಥ್ ಕುನ್ನೂರ, ಲಾಲಸಾಬ ನದಾಫ, ಅಂಬ್ರೋಸ್ ಮೆಲ್ಲೊ, ನಬಿಸಾಬ ಮೆಳ್ಳಗಟ್ಟಿ ಹಾಗೂ ಸಾತಪ್ಪ ದೇಸಾಯಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಶಿಗ್ಗಾಂವಿ ತಹಶೀಲ್ದಾರ್​ ಕಚೇರಿಯಲ್ಲಿ ಸವಣೂರ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ ಹಾಗೂ ಸಹಾಯಕ ಚುನಾವಣಾಧಿಕಾರಿ ಸಂತೋಷ ಹಿರೇಮಠ ಅವರು ಉಪಸ್ಥಿತರಿದ್ದರು. ಅ.28 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ಅ.30 ನಾಮಪತ್ರ ವಾಪಸ್​ ಪಡೆಯಲು ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ಸೂಕ್ತ ದಾಖಲೆಗಳಿಲ್ಲದಿದ್ದರೇ ಅವರ ನಾಮಪತ್ರಗಳು ತಿರಸ್ಕೃತವಾಗಲಿವೆ. ನಾಮಪತ್ರಗಳು ಸರಿಯಾಗಿದ್ದು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದವರ ಉಮೇದುವಾರಿಕೆ ಇಲ್ಲದಂತಾಗುತ್ತದೆ. ಅಕ್ಟೋಬರ್​ 30 ಸಂಜೆಯ ನಂತರ ಶಿಗ್ಗಾಂವಿ ಉಪಚುನಾವಣೆಯ ಅಖಾಡದ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ:ಶಿಗ್ಗಾಂವಿಯಲ್ಲಿ ಖಾದ್ರಿ ಪ್ರಶ್ನೆ ಬರಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಅಷ್ಟೇ : ಸತೀಶ್ ಜಾರಕಿಹೊಳಿ

ABOUT THE AUTHOR

...view details