RCB vs GG Highlight: ಮಹಿಳಾ ಪ್ರೀಮಿಯರ್ ಲೀಗ್ (WPL 2025) 3ನೇ ಆವೃತ್ತಿ ಶುಕ್ರವಾರ ಪ್ರಾರಂಭವಾಗಿದೆ. 2024ರಲ್ಲಿ ಚಾಂಪಿಯನ್ ಆಗಿದ್ದ RCB ಉದ್ಘಾಟನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (GG) ವಿರುದ್ಧ ಕಾಳಗಕ್ಕೆ ಇಳಿದಿತ್ತು.
ವಡೋದರದ ಕೋಟುಂಬಿ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್ಸಿಬಿ ಬೃಹತ್ ಮೊತ್ತವನ್ನು ಬೆನ್ನಟ್ಟಿ ಯಶಸ್ವಿಯಾಗಿ ಗೆಲುವು ಸಾಧಿಸಿದೆ. ಇದರೊಂದಿಗೆ 3ನೇ ಆವೃತ್ತಿಯಲ್ಲಿ ಮಂಧಾನ ಪಡೆ ಶುಭಾರಂಭ ಮಾಡಿದೆ.
ಗುಜರಾತ್ ಜೈಂಟ್ಸ್:ಉಭಯ ತಂಡಗಳ ನುಡವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಜೈಂಟ್ಸ್ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ನಾಯಕಿ ಆಶ್ಲೆಗ್ ಗಾರ್ಡನರ್ ಮತ್ತು ವಿಕೆಟ್ ಕೀಪರ್ ಬೆಥ್ ಮೂನಿ ಸ್ಪೋಟಕ ಪ್ರದರ್ಶನ ನೀಡಿದರು.
ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದ ಮೂನಿ 42 ಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 56 ರನ್ ಚಚ್ಚಿ ಅರ್ಧಶತಕ ಪೂರ್ಣಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಆಶ್ಲೇಗ್ ಗಾರ್ಡನರ್ 37 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ಸಿಡಿಸಿ 79 ರನ್ ಕಲೆ ಹಾಕಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನಿಂದಾಗಿಗೆ ಗುಜರಾತ್ ಮಹಿಳಾ ತಂಡ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಈ ಬೃಹತ್ ಗುರಿ ಭೇದಿಸಲು ಮುಂದಾದ ಆರ್ಸಿಬಿಗೆ ಆರಂಭಿಕ ಹಿನ್ನಡೆ ಆಯ್ತು. ಓನರ್ ಆಗಿ ಬ್ಯಾಟಿಂಗ್ ಗೆ ಬಂದ ನಾಯಕಿ ಸ್ಮೃತಿ ಮಂಧಾನ 9ರನ್, ವ್ಯಾಟ್ ಹೊಡ್ಜ್ 4ರನ್ ಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಬಳಿಕ ಬ್ಯಾಟಿಂಗ್ ಚಾರ್ಜ್ ತೆಗದುಕೊಂಡ ಎಲ್ಲಿಸ್ ಪೆರಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಚಚ್ಚಿ ನಿರ್ಗಮಿಸಿದರು.
ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್:ಎಲ್ಲಿಸ್ ಪೆರಿ ನಿರ್ಗಮಿಸಿದ ಬಳಿಕ ಸಿಡಿದೆದ್ದ ರಿಚಾ ಘೋಷ್ ಗುಜರಾತ್ ಬೌಲರ್ ಗಳನ್ನು ಹಿಗ್ಗಾಮುಗ್ಗ ದಂಡಿಸಿದರು. ಕನಿಕಾ ಅಹುಜಾ ಅವರೊಂದಿಗೆ ಸೇರಿ ಅಜೇಯ ಇನ್ನಿಂಗ್ಸ್ ಆಡಿ ವೇಗವಾಗಿ ಅರ್ಧಶತಕ ಪೂರ್ಣಗೊಳಿಸಿದರು. ಕೇವಲ 27 ಎಸೆಗಳಲ್ಲಿ 64 ರನ್ ಚಚ್ಚಿದರು. ಇದರಲ್ಲಿ 7 ಬೌಂಡರಿ, 4 ಸಿಕ್ಸರ್ ಗಳು ಸೇರಿದವು. ಇದರೊಂದಿಗೆ ಗೆಲುವಿನ ನಗಾರಿಯನ್ನು ಬಾರಿಸಿದರು.
ವೇಗದ ಅರ್ಧಶತಕ:ಆರಂಭದಿಂದಲೆ ಭರ್ಜರಿ ಬ್ಯಾಟ್ ಬೀಸಿದ ರಿಚಾ ಕೇವಲ 23 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ವೇಗಾವಗಿ ಅರ್ಧಶತಕ ಸಿಡಿಸಿದ 5 ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.
ರೇಣುಕಾ ಸಿಂಗ್ ಭರ್ಜರಿ ಬೌಲಿಂಗ್: ಆರ್ಸಿಬಿ ಪರ ರೇಣುಕಾ ಸಿಂಗ್ ಉತ್ತಮ ಬೌಲಿಂಗ್ ಮಾಡಿದರು ಇವರು 4 ಓವರ್ಗಳಲ್ಲಿ 25 ರನ್ ನೀಡಿ 2 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಕನಿಕಾ ಅಹುಜಾ ವೆರ್ಹ್ಯಾಮ್, ಪ್ರೇಮಾ ರಾವತ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:ವಿರಾಟ್ ಕೊಹ್ಲಿ ದಾಖಲೆ ಮುರಿದು ನಂಬರ್ 1 ಸ್ಥಾನಕ್ಕೇರಿದ ಬಾಬರ್ ಅಜಮ್