ಕರ್ನಾಟಕ

karnataka

ETV Bharat / sports

3 ಬಾರಿ ಗ್ರ್ಯಾಂಡ್​ ಸ್ಲ್ಯಾಮ್​ ಚಾಂಪಿಯನ್​ ಅಲ್ಕರಾಜ್​ಗೆ ಸೋಲುಣಿಸಿದ 74ನೇ ಶ್ರೇಯಾಂಕಿತ ಆಟಗಾರ - Carlos Alcaraz

ಯುಎಸ್​ ಓಪನ್​ ಟೆನ್ನಿಸ್​ ಟೂರ್ನಾಮೆಂಟ್​ನಲ್ಲಿ ಗ್ರ್ಯಾಂಡ್​ ಸ್ಲ್ಯಾಮ್​ ಚಾಂಪಿಯನ್​ ಅಲ್ಕರಾಜ್, 74ನೇ ಶ್ರೇಯಾಂಕಿತ ಡಚ್​ ಆಟಗಾರ ವಿರುದ್ಧ ಸೋಲನುಭವಿಸಿದ್ದಾರೆ.

ಕಾರ್ಲೋಸ್ ಅಲ್ಕರಾಜ್ ಮತ್ತು ಬೋಟಿಕ್ ವ್ಯಾನ್ ಡಿ ಝಾನ್‌ಸ್ಚುಲ್ಪ್
ಕಾರ್ಲೋಸ್ ಅಲ್ಕರಾಜ್ ಮತ್ತು ಬೋಟಿಕ್ ವ್ಯಾನ್ ಡಿ ಝಾನ್‌ಸ್ಚುಲ್ಪ್ (AP)

By ETV Bharat Sports Team

Published : Aug 30, 2024, 3:48 PM IST

ನ್ಯೂಯಾರ್ಕ್ (ಯುಎಸ್‌ಎ): ವಿಶ್ವದ 3ನೇ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕರಾಜ್ ಯುಎಸ್ ಓಪನ್‌ ಬ್ಯಾಡ್ಮಿಂಟನ್​ ಟೂರ್ನಾಮೆಂಟ್​ನ ಎರಡನೇ ಸುತ್ತಿನಲ್ಲಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಗುರುವಾರ ತಡರಾತ್ರಿ ನಡೆದ ಈ ಪಂದ್ಯದಲ್ಲಿ ಡಚ್ ಆಟಗಾರ ಬೊಟಿಕ್ ವ್ಯಾನ್ ಡಿ ಝಾಂಡ್ ಸ್ಕಲ್ಪ್ ಎದುರು ಸೋಲನುಭವಿಸಿದ್ದಾರೆ. 21ರ ಹರೆಯದ ಅಲ್ಕರಾಜ್‌ನ 6-1, 7-5, 6-4 ನೇರ ಸೆಟ್​ಗಳಿಂದ ವಿಶ್ವದ 74ನೇ ಶ್ರೇಯಾಂಕಿತ ಡಚ್‌ ಆಟಗಾರನ ವಿರುದ್ಧ ಸೋಲನುಭವಿಸಿದ್ದಾರೆ.

ವಿಂಬಲ್ಡನ್ 2021ರ ನಂತರ ಪ್ರಮುಖ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಅಲ್ಕರಾಜ್ ಸೋಲನ್ನು ಅನುಭವಿಸಿದರು. ವಿಂಬಲ್ಡನ್ 2021 ರಲ್ಲಿ, ಆಗಿನ ವಿಶ್ವದ 75ನೇ ಶ್ರೇಯಾಂಕದ ಅಲ್ಕರಾಜ್ ಎರಡನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಸೋಲನ್ನು ಕಂಡಿದ್ದರು. ಇದಕ್ಕೂ ಮೊದಲು, ಡಚ್​ ಆಟಗಾರ ಅಲ್ಕರಾಜ್ ವಿರುದ್ಧ ಎರಡು ಪಂದ್ಯಗಳನ್ನು ಆಡಿದ್ದರು ಮತ್ತು ಎರಡರಲ್ಲೂ ಸೋಲನ್ನು ಕಂಡಿದ್ದರು. ಎರಡೂ ಪಂದ್ಯಗಳಲ್ಲಿ ಒಂದೇ ಒಂದು ಸೆಟ್ ಅನ್ನು ಗೆಲ್ಲಲು ಈ ಆಟಗಾರನಿಗೆ ಸಾಧ್ಯವಾಗಿರಲಿಲ್ಲ, ಆದರೆ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದಾರೆ.

ಈ ಪಂದ್ಯದಲ್ಲಿ ಆರಂಭಿಕ ಸೆಟ್‌ ಅನ್ನು ಡಚ್​ ಆಟಗಾರ ಗೆದ್ದುಕೊಂಡರು. ಇಬ್ಬರು ಆಟಗಾರರು ನಡುವೆ ಮೊದಲ ಸುತ್ತಿನಲ್ಲಿ ಪೈಪೋಟಿ ಏರ್ಪಟ್ಟಿತ್ತಾದರೂ ಡಚ್​ ಆಟಗಾರ ಸೆಟ್​ ಅನ್ನು ಗೆದ್ದುಕೊಂಡರು. ಇದಾದ ನಂತರ, ಮುಂದಿನ ಎರಡು ಸೆಟ್‌ಗಳಲ್ಲಿಯೂ ಜಾನ್ಸ್ಚುಲಾಪ್ ಉತ್ತಮ ಪ್ರದರ್ಶನ ನೀಡಿ ಗೆಲುವು ತಮ್ಮದಾಗಿಸಿಕೊಂಡರು. ಇದರೊಂದಿಗೆ ಗ್ರ್ಯಾನ್​​ಸ್ಲಾಮ್​ ಟೂರ್ನಿಯಲ್ಲಿ ಸತತ 15 ಗೆಲುವು ಸಾಧಿಸಿದ್ದ ಅಲ್ಕರಾಜ್​ ಅವರ ಗೆಲುವಿನ ಓಟಕ್ಕೆ ಬ್ರೇಕ್​ ಬಿತ್ತು.

ಡಚ್​ ಆಟಗಾರ ಹೊಸ ಇತಿಹಾಸವನ್ನು ನಿರ್ಮಿಸಿದರು. ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ ಮೊದಲ ಡಚ್​ ಆಟಗಾರ ಎಂಬ ದಾಖಲೆ ಬರೆದರು.

ಇದನ್ನೂ ಓದಿ:ಹಾಕಿ ಏಷ್ಯನ್​​ ಚಾಂಪಿಯನ್ಸ್ ಟ್ರೋಫಿ: ವಿಮಾನ ಟಿಕೆಟ್ ಖರೀದಿಸಲು ಪಾಕ್ ತಂಡದ ಬಳಿ ಇಲ್ಲ ಹಣ, ಸಾಲ ಪಡೆದು ಪ್ರಯಾಣ - Pakistan Hockey Team Took Loan

ABOUT THE AUTHOR

...view details