ಕರ್ನಾಟಕ

karnataka

ETV Bharat / photos

ಪ್ರೇಮಿಗಳ ದಿನದಂದು ಪ್ರೀತಿಪಾತ್ರರಿಗೆ ರಶ್ಮಿಕಾ ಮಂದಣ್ಣ​ ಸ್ಪೆಷಲ್​ ವಿಶ್​ - ರಶ್ಮಿಕಾ ಮಂದಣ್ಣ ಪ್ರೇಮಿಗಳ ದಿನ

ಬಹುಭಾಷೆಗಳಲ್ಲಿ ಅಭಿನಯಿಸುವ ಮೂಲಕ ವೃತ್ತಿಜೀವನ ವಿಸ್ತರಿಸಿಕೊಳ್ಳುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಬಹಳ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಸ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ, "ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮೈ ಲವ್ಸ್" ಎಂದು ಬರೆದುಕೊಂಡಿದ್ದಾರೆ. ಬಿಸಿಲಿನಲ್ಲಿ ನಿಂತು ತಮ್ಮ ಕೈಗಳಿಂದ ಲವ್​/ಹಾರ್ಟ್ ಸಿಂಬಲ್​ ಅನ್ನು ಪ್ರದರ್ಶಿಸಿದ್ದಾರೆ. ನೆರಳಿನ ವಿಡಿಯೋ ಬಹಳ ಆಕರ್ಷಕವಾಗಿದೆ.

By ETV Bharat Karnataka Team

Published : Feb 14, 2024, 3:48 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ.
ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಬಹಳ ವಿಶೇಷವಾಗಿ ಶುಭಾಶಯ ಕೋರಿದ ಅಭಿನೇತ್ರಿ.
ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ಆಕರ್ಷಕ ನೆರಳಿನ ವಿಡಿಯೋ ಹಂಚಿಕೊಂಡ ನಟಿ.
"ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮೈ ಲವ್ಸ್" ಎಂದು ಕ್ಯಾಪ್ಷನ್​ ಕೊಟ್ಟ ಚೆಲುವೆ.
ನೆರಳಿನ ವಿಡಿಯೋ ಬಹಳ ಆಕರ್ಷಕವಾಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ನಟಿ ಮೇಲೆ ಪ್ರೀತಿಯ ಧಾರೆಯೆರೆಯುತ್ತಿರುವ ಅಭಿಮಾನಿಗಳು.
ಸೋಷಿಯಲ್​​ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿರಲಿಲ್ಲ.
ಅತಿಯಾದ ಕೆಲಸದಿಂದ ಕೊಂಚ ಅಸ್ವಸ್ಥರಾಗಿದ್ದರಂತೆ.
ಸ್ವತಃ ನಟಿಯೇ ಈ ಮಾತನ್ನು ತಿಳಿಸಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ಅಲ್ಲದೇ ಕೆಟ್ಟವರೆಲ್ಲಾ ದೂರ ಇರಿ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಿನಿಮಾ ಶೂಟಿಂಗ್​​​ನಲ್ಲಿ ಸಖತ್​ ಬ್ಯುಸಿ.
ನಟಿ ಮುಂದಿನ ಸಿನಿಮಾಗಳ ಮೇಲಿದೆ ಸಾಕಷ್ಟು ನಿರೀಕ್ಷೆ.

ABOUT THE AUTHOR

...view details