ಹೈದರಾಬಾದ್:ಕೈಗಾರಿಕಾ ಪೂರ್ವ ಯುಗದಿಂದ ಇಲ್ಲಿವರೆಗೆ ಜಾಗತಿಕ ತಾಪಮಾನದ ದಾಖಲೆಗಳ ಪ್ರಕಾರ ತಾಪಮಾನದಲ್ಲಿ ಸರಾಸರಿ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಆಗಿದೆ ಎಂಬುದನ್ನ ಅಂಕಿ - ಅಂಶಗಳು ತೋರಿಸುತ್ತಿವೆ. ಈ ತಾಪಮಾನ ಏರಿಕೆ ಈ ಪ್ರವೃತ್ತಿಯು 2016, 2017, ಮತ್ತು 2019 ಮತ್ತು 2023 ರಲ್ಲಿ ಭಾಗಶಃ 1.5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯವಾಗಿ ಒಪ್ಪಿಕೊಂಡಿರುವ 1.5 ಡಿಗ್ರಿ ಮಿತಿಯನ್ನು 2024 ರಲ್ಲಿ ಮೀರುವ ಸಾಧ್ಯತೆಯಿದೆ ಎಂದು ಹವಾಮಾನ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ತಜ್ಞರು ಹೇಳುವುದಿಷ್ಟು:ತಜ್ಞರ ಪ್ರಕಾರ, 2050 ರ ವೇಳೆಗೆ, ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ತಾಪಮಾನ ಮಾನವ ಬದುಕುಳಿಯಲು ಬೇಕಾದ ವಾತಾವರಣದ ಮಿತಿಗಳನ್ನು ದಾಟಿ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಾತಾವರಣವನ್ನು ತಂಪಾಗಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಈ ಹೆಚ್ಚಾಗಿದೆ. ಹೆಚ್ಚುವರಿ ಶಾಖವು ಕಾಲೋಚಿತ ತಾಪಮಾನದ ವಿಪರೀತತೆಯನ್ನು ಹೆಚ್ಚುವಂತೆ ಮಾಡುತ್ತದೆ. ಧ್ರುವ ಪ್ರದೇಶಗಳಲ್ಲಿ ಮತ್ತು ಹಿಮಾಲಯದಂತಹ ಪರ್ವತ ಸರಪಳಿಗಳ ಮೇಲೆ ಮೇಲೆ ಏರುತ್ತಿರುವ ತಾಪಮಾನ ಪರಿಣಾಮ ಬೀರಲಿದ್ದು, ಹಿಮದ ಹೊದಿಕೆಯನ್ನು ಕಡಿಮೆ ಮಾಡುತ್ತದೆ. ಭಾರಿ ಮಳೆಯನ್ನು ತೀವ್ರಗೊಳಿಸುತ್ತದೆ ಮತ್ತು ಸಸ್ಯಗಳು ಮತ್ತು ಪ್ರಾಣಿಗಳ ಆವಾಸಸ್ಥಾನಗಳ ಶ್ರೇಣಿಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ.
ಎಚ್ಚರಿಕೆ ಅಗತ್ಯ:ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಭೂಕುಸಿತ, ಕಾಳ್ಗಿಚ್ಚು, ಹಠಾತ್ ಪ್ರವಾಹ ಮತ್ತು ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳ ಆವರ್ತನಗಳನ್ನು ನಾವು ನೀವೆಲ್ಲ ಈಗಾಗಲೇ ಕಾಣುತ್ತಿದ್ದೇವೆ. ಇದರಿಂದಾಗಿ ಭಾರಿ ಮಾನವ ಮತ್ತು ಆರ್ಥಿಕ ನಷ್ಟಗಳು ಉಂಟಾಗುತ್ತವೆ. ವಿಶ್ವಸಂಸ್ಥೆಯ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್‌ನ ಇತ್ತೀಚಿನ ವರದಿ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯು ಶತಮಾನಗಳಿಂದ ಸಹಸ್ರಮಾನಗಳವರೆಗೆ ಬದಲಾಯಿಸಲಾಗದ ಬದಲಾವಣೆಗಳಾಗಿವೆ. ವಿಶೇಷವಾಗಿ ಸಾಗರ, ಹಿಮದ ಹಾಳೆಗಳು ಮತ್ತು ಜಾಗತಿಕ ಸಮುದ್ರ ಮಟ್ಟದಲ್ಲಿನ ಬದಲಾವಣೆಗಳು ಈಗ ಆ ನಂಬಿಕೆಗಳನ್ನು ಸುಳ್ಳು ಮಾಡಿದ್ದು ಅಪಾಯದ ಮುನ್ಸೂಚನೆ ಎಂದು ಎಚ್ಚರಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಹವಾಮಾನ ಬದಲಾವಣೆಗಳು ಸಂಭವಿಸುತ್ತಲೇ ಸಾಗಿವೆ. ಹೀಗಾಗಿ ತುರ್ತಾಗಿ ಅವುಗಳನ್ನು ಕಡಿಮೆ ಮಾಡಬೇಕಾಗಿರುವುದು ಸದ್ಯದ ಅಗತ್ಯವಾಗಿದೆ.
ಹವಾಮಾನ ವೈಪರೀತ್ಯ ತಡೆದುಕೊಳ್ಳಬಲ್ಲರೇ?:ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು, ಪರಿಸರ ಹಾನಿ ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಎರಡರ ಗುರಿಗಳನ್ನು ಸಾಧಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. 2022 ರಲ್ಲಿ ಪ್ರಕಟವಾದ ಮಾಪನಗಳ ಪ್ರಕಾರ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಚರ್ಚೆಯ ನಡುವೆ, ಅದರ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದೆ.
ಹವಾಮಾನ ಬದಲಾವಣೆ ಮತ್ತು ಗಂಭೀರತೆ:ಜಾಗತಿಕ ಸರಾಸರಿ ತಾಪಮಾನವು ಮಿತಿಮೀರುತ್ತದೆ. ಅದು 1.5 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗುತ್ತಿದೆ. ಈ ಸನ್ನಿವೇಶವನ್ನು ನಾವು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವ ಕಾಲ ಬಂದಿದೆ. ಇದನ್ನು ಕಡಿಮೆ ಮಾಡಲು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ.