ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುವಾಗ ಅಥವಾ ಸಂಬಂಧದಲ್ಲಿ ಇದ್ದರೆ, ಆತ ಅಥವಾ ಆಕೆ ನಿಮ್ಮನ್ನು ಪೂರ್ಣವಾಗಿ ಇಷ್ಟಪಡುತ್ತಾರೋ ಇಲ್ಲವೋ ಎಂಬುದು ಅವರ ಭಾವನೆಗಳಲ್ಲಿ ಕಂಡು ಹಿಡಿಯಬಹುದು. ಅವರ ನಡವಳಿಕೆಗಳು ನಿಮ್ಮ ಬಾಂಧವ್ಯದ ಬಗ್ಗೆ ಹೇಳುತ್ತದೆ. ಜೀವನದಲ್ಲಿ ನೀವು ಅವರಿಗೆ ಎಷ್ಟು ಮುಖ್ಯ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಆಕೆ ಅಥವಾ ಆತನ ಕೆಲಸಗಳು, ಪ್ರಯತ್ನ, ಅಸಂಗತತೆ ಗಮನಿಸಿದರೆ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ಹೊಂದಿಲ್ಲ ಎಂಬುದನ್ನು ಗುರುತಿಸಬಹುದು.
ನೀವು ಬಯಸಿದಂತೆ ಆತ/ ಆಕೆ ಇದ್ದಾನೋ ಇಲ್ಲವೋ ಎಂದು ತಿಳಿದುಕೊಳ್ಳಲು ಈ ಒಂಬತ್ತು ಸೂಚನೆಗಳನ್ನು ಗಮನಿಸಬೇಕು. ಇದರಲ್ಲಿನ ಅಂಶಗಳು ಅವರಲ್ಲಿ ಕಂಡುಬಂದರೆ, ನೀವು ಆಗಲೇ ಎಚ್ಚೆತ್ತುಕೊಳ್ಳಬೇಕು. ಅವುಗಳು ಯಾವುವು ಎಂಬುದರ ವಿವರ ಇಲ್ಲಿದೆ.
- ಅಪರೂಪಕ್ಕೆ ಭೇಟಿ, ಸಂಪರ್ಕ
ನಿಮ್ಮ ಮೇಲೆ ನಿಜವಾದ ಆಸಕ್ತಿ ಇದ್ದರೆ, ಆ ವ್ಯಕ್ತಿಗಳು ನಿಮ್ಮನ್ನು ಭೇಟಿ ಮಾಡಲು ಅಥವಾ ಮಾತುಕತೆ ನಡೆಸಲು ಹವಣಿಸುತ್ತಾರೆ. ಇದ್ಯಾವುದೂ ಇಲ್ಲದೇ ಮಿತ ಮಾತು, ಕಡಿಮೆ ಭೇಟಿ, ನಿಯಮಗಳು ಅನುಸರಿಸಿದರೆ ಅವರಿಗೆ ನಿಮ್ಮ ಅಗತ್ಯ ಇಲ್ಲ ಎಂಬುದನ್ನು ತಿಳಿದುಕೊಳ್ಳಿ.
- ನಿಮಗಾಗಿ ಸಮಯ ಮೀಸಲಿಡಲ್ಲ
ವ್ಯಕ್ತಿಯ ಮೇಲೆ ನಿಜವಾದ ಪ್ರೀತಿ ಇದ್ದರೆ, ಎಂಥದ್ದೇ ಸಂದರ್ಭ ಬಂದರೂ ಅದನ್ನು ಮೀರಿ ಅವರನ್ನು ಸಂಧಿಸುವ ಪ್ರಯತ್ನ ಮಾಡುತ್ತಾರೆ. ಎಷ್ಟೇ ಕಾರ್ಯ ಭಾರ ಇದ್ದರೂ ಬಿಡುವು ಮಾಡಿಕೊಂಡು ನಿಮಗೆ ಸಮಯ ನೀಡುತ್ತಾರೆ. ಭೇಟಿಗೆ, ಮಾತಿಗೆ ಸಮಯ ನಿಗದಿ ಮಾಡಿದರೆ ಅದು ಬರೀ ತೋರಿಕೆ ಮತ್ತು ಆದ್ಯತೆ ಇಲ್ಲ ಎಂಬುದರ ಸಂಕೇತ.
- ಒಟ್ಟಿಗೆ ಕುಳಿತು ಭವಿಷ್ಯದ ಯೋಜನೆ ರೂಪಿಸುವುದಿಲ್ಲ
ಭವಿಷ್ಯದ ಬಗ್ಗೆ ಯಾವುದೇ ಜೋಡಿಗಾದರೂ ಕನಸು ಇರುವುದು ಸಹಜ. ಅದನ್ನು ಪರಸ್ಪರ ಚರ್ಚೆ ಮಾಡುತ್ತಾರೆ. ಇದ್ಯಾವುದೂ ನಿಮ್ಮ ಪಾತ್ರರಲ್ಲಿ ಕಾಣದೇ ಹೋದರೆ ನಿಮ್ಮ ಅಗತ್ಯ ಮತ್ತು ದೀರ್ಘಾವಧಿ ಜೀವನದ ಕನಸು ಅವರಲ್ಲಿ ಇಲ್ಲ ಎಂಬುದು ಮನವರಿಕೆ ಮಾಡಿಕೊಳ್ಳಿ.
- ನಿಮಗೆ ಆದ್ಯತೆ ನೀಡುತ್ತಿಲ್ಲ ಅನಿಸುವುದು
ಗಾಢವಾದ ಪ್ರೀತಿ ಇದ್ದರೆ ಅವರು ಯಾವಾಗಲೂ ತನ್ನ ಸಂಗಾತಿಗೆ ಹೆಚ್ಚಿನ ಸಮಯ, ಆದ್ಯತೆ ನೀಡುತ್ತಾರೆ. ಎಲ್ಲದಕ್ಕೂ ಇತಿ ಮಿತಿ ಹಾಕಿಕೊಂಡರೆ ಅಥವಾ ನಿಮಗಾಗಿ ಏನೂ ಮಾಡುತ್ತಿಲ್ಲ ಎಂದಾದರೆ ಅವರಿಗೆ ನಿಮ್ಮ ಅಗತ್ಯ ಕಡಿಮೆ ಎಂಬುದು ಇದರ ಸೂಚನೆ.
- ಮಿತ ಮಾತು, ಅದೂ ಅಸಂಬದ್ಧ