ಲಂಡನ್:ಜಗತ್ತಿನಾದ್ಯಂತ 300 ಮಿಲಿಯನ್ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಖಿನ್ನತೆ ಸಮಸ್ಯೆಯಿಂದ ಬಳಲುತ್ತಿರುವರು ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ನಡಿಗೆ ಅಥವಾ ಜಾಗಿಂಗ್, ಯೋಗ ಮತ್ತು ಶಕ್ತಿ ತರಬೇತಿಗಳನ್ನು ಪಡೆಯುವುದರಿಂದ ಹೆಚ್ಚಿನ ಪ್ರಯೋಜನಗಳಿವೆ ಎಂದು ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿದೆ. ಯೋಗ, ಜಾಗಿಂಗ್ ಅಥವಾ ಸೈಕೋಥೆರಪಿ ಮತ್ತು ಔಷಧಗಳ ಮೂಲಕ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಖಿನ್ನತೆ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಚಿಕಿತ್ಸೆಯ ಮಾರ್ಗಸೂಚಿಗಳು ಮತ್ತು ಹಿಂದಿನ ಪುರಾವೆಗಳ ವಿಮರ್ಶೆಗಳು ಖಿನ್ನತೆ ನಿರ್ವಹಣೆಗೆ ವ್ಯಾಯಾಮ ಉತ್ತಮ ಎಂಬುದನ್ನು ಹೇಗೆ ಶಿಫಾರಸು ಮಾಡಬೇಕು ಎಂದು ಒಪ್ಪುವುದಿಲ್ಲ.
ಈ ಅಧ್ಯಯನಕ್ಕಾಗಿ 218 ಪ್ರಯೋಗಗಳನ್ನು ನಡೆಸಿದ್ದು, ಖಿನ್ನತೆ ಹೊಂದಿರುವ 14,170 ಮಂದಿ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಈ ಅಧ್ಯಯನವನ್ನು ಬಿಎಂಜೆಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನವೂ ಚಟುವಟಿಕೆಗಳ ಮೂಲಕ ಹೆಚ್ಚು ಸಕ್ರಿಯವಾಗಿರುವುದರಿಂದ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ಸೂಚಿಸಿದೆ.
ಸ್ಪೇನ್, ಡೆನ್ಮಾರ್ಕ್, ಆಸ್ಟ್ರೇಲಿಯಾ ಮತ್ತು ಫಿನ್ಲ್ಯಾಂಡ್ನಲ್ಲಿ ಖಿನ್ನತೆ ಚಿಕಿತ್ಸೆಗೆ ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮವನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ನಿಯಂತ್ರಿತ ಗುಂಪಿಗೆ ಹೋಲಿಸಿದಾಗ ನೃತ್ಯ, ವಾಕಿಂಗ್, ಯೋಗ, ಏರೋಬಿಕ್ನಂತಹ ಚಟುವಟಿಕೆಗಳನ್ನು ಹೊಂದಿರುವ ಖಿನ್ನತೆಯ ಗುಂಪಿನಲ್ಲಿ ಸುಧಾರಣೆ ಕಂಡು ಬಂದಿದೆ. ಫಿಸಿಯೋಥೆರಪಿ ಜೊತೆಗೆ ವ್ಯಾಯಾಮವನ್ನು ಏರೋಬಿಕ್ ಮತ್ತು ಎಸ್ಎಸ್ಆರ್ಐನೊಂದಿಗೆ ಸಂಯೋಜಿಸಿದಾಗ ವ್ಯಾಯಾಮವು ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ.