ಕರ್ನಾಟಕ

karnataka

By ETV Bharat Karnataka Team

Published : Feb 7, 2024, 5:50 PM IST

ETV Bharat / health

ಪಿಸಿಒಎಸ್​ ಹೊಂದಿರುವ ಮಹಿಳೆಯರಿಗೆ ಮಧ್ಯವಯಸ್ಸಿನಲ್ಲಿ ಕಾಡಬಹುದು ಸ್ಮರಣಶಕ್ತಿ ಸಮಸ್ಯೆ; ಅಧ್ಯಯನ

ಪಿಸಿಒಎಸ್​ ಎಂಬುದು ಹಾರ್ಮೋನ್​ ಅಸ್ವಸ್ಥತೆಯಾಗಿದ್ದು, ಇದು ಮಹಿಳೆಯರಲ್ಲಿ ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ.

women with pcos may face memory issues in middle age
women with pcos may face memory issues in middle age

ಸ್ಯಾನ್​ ಫ್ರಾನ್ಸಿಸ್ಕೋ: ಪಾಲಿಸಿಸ್ಟಿಕ್​ ಓವರಿ ಸಿಂಡ್ರೋಮ್​ (ಪಿಸಿಒಎಸ್​​)ನಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಮಧ್ಯವಯಸ್ಸಿನಲ್ಲಿ ಸ್ಮರಣಶಕ್ತಿ ಮತ್ತು ಚಿಂತನೆಯಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಪಿಸಿಒಎಸ್​ ಎಂಬುದು ಹಾರ್ಮೋನ್​ ಅಸ್ವಸ್ಥತೆಯಾಗಿದ್ದು, ಇದು ಮಹಿಳೆಯರಲ್ಲಿ ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ. ಅಲ್ಲದೇ ಇದು ಆಂಡ್ರೊಜೆನ್​ ಎಂಬ ಹಾರ್ಮೋನ್​ ಮಟ್ಟ ಏರಿಕೆಗೆ ಕಾರಣವಾಗುತ್ತದೆ. ಈ ಸಮಸ್ಯೆ ಹೊಂದಿದಲ್ಲಿ ಕೂದಲ ಬೆಳವಣಿಗೆ, ನೋವು, ಫಲವತ್ತತೆ ಮತ್ತು ಕಳಪೆ ಚಯಾಪಚಯನದ ಸಮಸ್ಯೆಗಳು ಕಾಡುತ್ತವೆ.

ಈ ಅಧ್ಯಯನವನ್ನು ಜರ್ನಲ್​ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ. ಪಿಸಿಒಎಸ್ ಸಮಸ್ಯೆಯು​ ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಶೇ 10ರಷ್ಟು ಪರಿಣಾಮವನ್ನು ಹೊಂದಿದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಎಂಡಿ ಹಾಗೂ ಅಧ್ಯಯನದ ಲೇಖಕರಾಗಿರುವ ಹೀದರ್ ಜಿ. ಹಡಲ್ಸ್ಟನ್ ತಿಳಿಸಿದ್ದಾರೆ.

ಪಿಸಿಒಎಸ್​ ಚಯಪಚಯನ ಸಮಸ್ಯೆಗಳಾದ ಸ್ಥೂಲಕಾಯ ಮತ್ತು ಮಧುಮೇಹದೊಂದಿಗೆ ಸಂಬಂಧವನ್ನು ಹೊಂದಿದೆ. ಇದು ಹೃದಯ ಸಮಸ್ಯೆಗೂ ಕಾರಣವಾಗಬಹುದು. ಇದು ಮೆದುಳಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಡಿಮೆ ಪ್ರಮಾಣದಲ್ಲಿ ತಿಳಿಸಿದೆ. ನಮ್ಮ ಅಧ್ಯಯನದ ಫಲಿತಾಂಶದಲ್ಲಿ ಈ ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಮಧ್ಯವಯಸ್ಸಿನಲ್ಲಿ ಕಡಿಮೆ ಸ್ಮರಣಶಕ್ತಿ ಮತ್ತು ಯೋಚನಾ ಕೌಶಲ್ಯದ ಬದಲಾವಣೆಗೆ ಕಾರಣವಾಗುತ್ತದೆ ಎಂದು ತೋರಿಸಿದೆ ಎಂದಿದ್ದಾರೆ.

ಈ ಸಮಸ್ಯೆಯು ವೈಯಕ್ತಿಕ ಮಟ್ಟದಲ್ಲಿ ಅಂದರೆ, ಜೀವನದ ಗುಣಮಟ್ಟ, ವೃತ್ತಿ ಯಶಸ್ಸು ಮತ್ತು ಆರ್ಥಿಕ ಭದ್ರತೆಯ ಮೇಲೆ ಪರಿಣಾಮವನ್ನು ಹೊಂದಿದೆ ಎಂಬುದನ್ನು ಕೂಡ ಉಲ್ಲೇಖಿಸಿದ್ದಾರೆ. ಈ ಅಧ್ಯಯನದಲ್ಲಿ 970 ಮಹಿಳೆಯರು ಭಾಗಿಯಾಗಿದ್ದು, ಇವರು 18 ರಿಂದ 30ರ ವಯೋಮಾನದವರಾಗಿದ್ದಾರೆ. ಇವರನ್ನು 30 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ.

ಏಕಾಗ್ರತೆ ಪರೀಕ್ಷೆಯಲ್ಲಿ ಭಾಗಿದಾರರಿಗೆ ಹಲವು ಬಣ್ಣದ ಶಬ್ಧಗಳ ಪಟ್ಟಿಯನ್ನು ನೀಡಲಾಯಿತು. ಅವರಿಗೆ ಆ ಅಕ್ಷರಗಳನ್ನು ಓದುವುದಕ್ಕಿಂತ ಅದರ ಬಣ್ಣಗಳನ್ನು ಗುರುತಿಸುವಂತೆ ತಿಳಿಸಲಾಯಿತು. ಉದಾಹರಣೆಗೆ ನೀಲಿ ಎಂಬ ಅಕ್ಷರವನ್ನು ಕೆಂಪು ಬಣ್ಣದಲ್ಲಿ ಬರೆದಿದ್ದು, ಕೆಂಪು ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ತಿಳಿಸಲಾಯಿತು. ಈ ಅಧ್ಯಯನದಲ್ಲಿ ಈ ಪರಿಸ್ಥಿತಿ ಹೊಂದಿಲ್ಲದವರಿಗೆ ಹೋಲಿಕೆ ಮಾಡಿದಾಗ ಪಿಸಿಒಎಸ್​​ ಹೊಂದಿರುವವರು ಸರಾಸಾರಿ ಸ್ಕೋರ್​ ಮಾಡಿದ್ದು, ಅವರಿಗಿಂತ ಶೇ 11ರಷ್ಟು ಕಡಿಮೆ ಅಂಕ ಗಳಿಸಿದ್ದಾರೆ.

ವಯಸ್ಸು, ವರ್ಣ ಮತ್ತು ಶಿಕ್ಷಣದ ಹೊಂದಾಣಿಕೆ ಬಳಿಕ ಸಂಶೋಧಕರು ಪಿಸಿಒಎಸ್​ ಹೊಂದಿರುವ ಮಹಿಳೆಯರು ಕಡಿಮೆ ಅಂಕ ಗಳಿಸಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ. ವಿಶೇಷವಾಗಿ ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಮೌಖಿಕ ಸಾಮರ್ಥ್ಯದಲ್ಲಿ ಅವರ ಪ್ರದರ್ಶನ ಸಮಸ್ಯೆರಹಿತ ಭಾಗಿದಾರರಿಗಿಂತ ಕಡಿಮೆಯಾಗಿದೆ.

ಹೃದಯರಕ್ತನಾಳದ ವ್ಯಾಯಾಮ ಮತ್ತು ಮಾನಸಿಕ ಆರೋಗ್ಯದ ಸುಧಾರಣೆಗಳು ವಯಸ್ಸಾದಂತೆ ಮೆದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲು ಸಹಾಯ ಮಾಡಬಹುದು ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಚಳಿಗಾಲದಲ್ಲಿ ಋತುಚಕ್ರದ ಸಮಸ್ಯೆ ಬಿಗಡಾಯಿಸಲು ಕಾರಣವೇನು?

ABOUT THE AUTHOR

...view details