ಹೈದರಾಬಾದ್: ವಿದ್ಯಾಭ್ಯಾಸ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳು ಹಗಲು ರಾತ್ರಿ ಎನ್ನದೇ ಓದಿನಲ್ಲಿ ತೊಡಗುತ್ತಾರೆ. ಪರೀಕ್ಷೆಯ ಒತ್ತಡಗಳು ಅವರಲ್ಲಿ ಕಳಪೆ ನಿದ್ರೆಗೆ ಕಾರಣವಾಗುತ್ತದೆ. ಉತ್ತಮ ನಿದ್ರೆ ಮಾಡಬೇಕು ಎಂದು ಮುಂದಾದರೂ ಹಲವು ಆಲೋಚನೆಗಳು ಅವರ ನಿದ್ರೆಗೆ ಭಂಗ ತರುವುದು ಸುಳ್ಳಲ್ಲ. ಹಾಗಂತ ನಿದ್ರೆ ನಿರ್ಲಕ್ಷ್ಯಿಸುವುದು ಉತ್ತಮವೂ ಅಲ್ಲ.
ಒತ್ತಡ ಎಂಬುದು ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಉದ್ಯೋಗಕಾಂಕ್ಷಿಗಳಲ್ಲಿ ಸಾಮಾನ್ಯ. ಹಾಗಂತ ನಿದ್ರೆ ಮಾಡದೇ ಇರಲು ಸಾಧ್ಯವಿಲ್ಲ. ರಾತ್ರಿ ನಿದ್ರೆ ಮಾಡಲೇಬೇಕು ಎಂದು ಗ್ಯಾಜೆಟ್ ಮತ್ತು ಲೈಟ್ ಆಫ್ ಮಾಡಿದರೂ, ಅನೇಕರು ಮೆದುಳಿನಲ್ಲಿ ಸಾವಿರ ಆಲೋಚನೆಗಳ ಸುರಳಿ ಸುತ್ತುತ್ತದೆ. ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಎಂದರೆ, ಜೋಲೀ ಸ್ಲೋವಿಸ್ ಅವರ ಬಟ್ಟರ್ಫ್ಲೈ ಟಾಪಿಂಗ್ ಟೆಕ್ನಿಕ್ (ಚಿಟ್ಟೆ ತಟ್ಟುವ ತಂತ್ರ). ಏನಿದು ತಂತ್ರ, ಇದನ್ನು ಅನುಸರಿಸುವುದು ಹೇಗೆ ಎನ್ನುವುದರ ಮಾಹಿತಿಯನ್ನು ತಿಳಿಯೋಣ.
ಸಾಮಾನ್ಯವಾಗಿ ಹಿರಿಯರು ಆಲೋಚನೆಗಳಿಲ್ಲದ ಜೀವನ ವ್ಯರ್ಥ ಎನ್ನುತ್ತಾರೆ. ಹಾಗಂತ ರಾತ್ರಿ ಮಲಗಿದ ನಂತರವೂ ಮೆದುಳು ಆಲೋಚನೆಗಳನ್ನು ಮಾಡುತ್ತಿದ್ದರೆ, ಅದು ತುಂಬಾ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಮನುಷ್ಯರಿಗೆ ನಿದ್ರೆ ಎಂಬುದು ಅಗತ್ಯವಾಗಿದೆ. ಆದರೆ, ಜೀವನಶೈಲಿ ಬದಲಾವಣೆ ಮತ್ತು ಕೆಲಸದ ಒತ್ತಡಗಳು ನಿದ್ರೆಯ ಕೊರತೆಯಂತಹ ಸಮಸ್ಯೆಗೆ ಕಾರಣವಾಗಿದೆ. ದೇಹಕ್ಕೆ ಸಾಕಷ್ಟು ನಿದ್ರೆ ಸಿಗಲಿಲ್ಲ ಎಂದರೆ, ಆಲಸ್ಯ ಉಂಟಾಗುತ್ತದೆ. ಇದು ನಿದ್ರೆ ಕೊರತೆ ಮತ್ತು ಏಕಾಗ್ರತೆ ನಷ್ಟಕ್ಕೂ ಕೂಡ ಕಾರಣವಾಗುತ್ತದೆ.
ಹೀಗೆ ಅನುಸರಿಸಿದ ಬಟ್ಟರ್ಫ್ಲೈ ಟಾಪಿಂಗ್ ಟೆಕ್ನಿಕ್: ಮಲಗುವ ಸಂದರ್ಭದಲ್ಲಿ ಮಿದುಳಿನಲ್ಲಿ ಆಲೋಚನೆಗಳ ಸರಮಾಲೆ ಉಂಟಾದರೆ, ಬಟರ್ಫ್ಲೈ ಟ್ಯಾಪಿಂಗ್ ತಂತ್ರ ಅನುಸರಿಸಿ. ಇದಕ್ಕೆ ನಿಮ್ಮ ಎರಡೂ ಅರ್ಧ ಕೈಗಳನ್ನು ಎದೆಯ ಮೇಲೆ ಇರಿಸಿ, ಹೆಬ್ಬೆರಳುಗಳನ್ನು ಕೊಕ್ಕೆಯಂತೆ ಜೋಡಿಸಿ. ಚಿಟ್ಟೆಯ ಆಕಾರದಲ್ಲಿ ಕೈಗಳನ್ನು ಇರಿಸಿ ಮತ್ತು ಎಡ ಮತ್ತು ಬಲ ಅಂಗೈಗಳನ್ನು ಎದೆಯ ಮೇಲೆ ಪರ್ಯಾಯವಾಗಿ ಬಡಿಯಿರಿ. ಒಂದೆರಡು ನಿಮಿಷಗಳ ಕಾಲ ಈ ಪ್ರಕ್ರಿಯೆಯನ್ನು ಮಾಡುವುದರಿಂದ ದೇಹವು ವಿಶ್ರಾಂತಿ ಮೋಡ್‌ಗೆ ಹೋಗುತ್ತದೆ ಎಂದು ಹೇಳುತ್ತಾರೆ.